alex Certify
ಕನ್ನಡ ದುನಿಯಾ       Mobile App
       

Kannada Duniya

ನಗ್ನನಾಗಿ ಈತ ಕಳ್ಳತನ ಮಾಡಲು ಕಾರಣವೇನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಕಳ್ಳರು ಸಿಕ್ಕಾಪಟ್ಟೆ ಬುದ್ಧಿವಂತರಾಗಿದ್ದಾರೆ. ಕಳ್ಳರು ಯಾವ ಯಾವ ರೀತಿ ಕಳ್ಳತನ ಮಾಡ್ತಾರೆ ಎನ್ನುವ ಬಗ್ಗೆ ಜನಸಾಮಾನ್ಯರು ಕಲ್ಪಿಸಿಕೊಳ್ಳುವುದೂ ಕಷ್ಟ. ಹೊಸ ಹೊಸ ವಿಧಾನದಲ್ಲಿ ಕಳ್ಳರು ಕಳ್ಳತನ ಮಾಡ್ತಿದ್ದಾರೆ. ಚೀನಾದಲ್ಲೊಬ್ಬ ಕಳ್ಳ ಕಳ್ಳತನ ಮಾಡಲು ವಿಚಿತ್ರ ದಾರಿ ಹುಡುಕಿಕೊಂಡಿದ್ದಾನೆ. ನಗ್ನನಾಗಿ ಕಳ್ಳತನಕ್ಕೆ ಇಳಿಯುವ ಈತ ಅದಕ್ಕೆ ಹೇಳಿದ ಕಾರಣ ನಗು ತರಿಸುವಂತಿದೆ.

ಸಾಮಾಜಿಕ ಜಾಲತಾಣದಲ್ಲಿ ಕಳ್ಳನ ವಿಡಿಯೋವೊಂದು ವೈರಲ್ ಆಗಿದೆ. ಸಂಪೂರ್ಣ ನಗ್ನನಾಗಿರುವ ಕಳ್ಳ ಕಚೇರಿಯೊಂದರಲ್ಲಿ ಕಳ್ಳತನ ಮಾಡಿದ್ದಾನೆ. ಆತನಿಗೆ ಆ ಕಚೇರಿಯಲ್ಲಿ ಸಿಸಿ ಟಿವಿ ಇರುವ ಬಗ್ಗೆ ಗೊತ್ತಿರಲಿಲ್ಲ. ಹಾಗಾಗಿ ಮುಖ ಮುಚ್ಚಿಕೊಳ್ಳದೆ ಕಳ್ಳತನ ಮಾಡಿದ್ದಾನೆ. ಈ ಸಿಸಿ ಟಿವಿ ವಿಡಿಯೋವನ್ನು ಕಚೇರಿ ಸಿಬ್ಬಂದಿ ಪೊಲೀಸರಿಗೆ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಕಳ್ಳನ ಬಗ್ಗೆ ಎಲ್ಲರಲ್ಲೂ ಒಂದು ಪ್ರಶ್ನೆ ಕಾಡಿತ್ತು. ಈ ಕಳ್ಳನೇಕೆ ನಗ್ನನಾಗಿ ಕಳ್ಳತನ ಮಾಡ್ತಾನೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕಳ್ಳ ಕಳ್ಳತನ ಮಾಡುವಾಗ ಬಟ್ಟೆ ಕೊಳಕಾಗುತ್ತೆ ಎನ್ನುವ ಕಾರಣಕ್ಕೆ ನಗ್ನನಾಗಿ ಕಳ್ಳತನ ಮಾಡಲು ಹೋಗ್ತಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...