alex Certify
ಕನ್ನಡ ದುನಿಯಾ       Mobile App
       

Kannada Duniya

35 ವರ್ಷಗಳ ನಂತ್ರ ಸೌದಿ ಜನರಿಗೆ ಸಿಗ್ತಿದೆ ಸಿನಿಮಾ ನೋಡುವ ಅವಕಾಶ

ಸೌದಿ ಅರೇಬಿಯಾದಲ್ಲಿ 35 ವರ್ಷಗಳ ನಂತ್ರ ಇದೇ ಮೊದಲ ಬಾರಿ ಚಿತ್ರಮಂದಿರ ತಲೆ ಎತ್ತಲಿದೆ. ಏಪ್ರಿಲ್ 18ರಂದು ಚಿತ್ರ ಪ್ರದರ್ಶನಗೊಳ್ಳಲಿದೆ. ಇದಕ್ಕೆ ಸೌದಿ ರಾಜ ಮೊಹಮದ್ ಬಿನ್ ಸಲ್ಮಾನ್ ಕಾರಣ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪಣ ತೊಟ್ಟಿರುವ ಸಲ್ಮಾನ್ ಮಹತ್ವದ ಹೆಜ್ಜೆಗಳನ್ನಿಡುತ್ತಿದ್ದಾರೆ.

1970 ರ ಅವಧಿಯಲ್ಲಿ ಸೌದಿ ಅರೇಬಿಯಾದಲ್ಲಿ ಸಿನಿಮಾ ಥಿಯೇಟರ್ ಗಳಿದ್ದವು. ಆದ್ರೆ ಮೌಲ್ವಿಗಳ ದಬ್ಬಾಳಿಕೆಯಿಂದಾಗಿ ಎಲ್ಲ ಥಿಯೇಟರ್ ಬಾಗಿಲು ಮುಚ್ಚಿದ್ದವು. ಈಗ ಮತ್ತೆ ಸಿನಿಮಾ ನೋಡುವ ಅವಕಾಶ ಸೌದಿ ಜನರಿಗೆ ಸಿಗ್ತಿದೆ. ಅಮೆರಿಕದ ಅತಿದೊಡ್ಡ ಸಿನಿಮಾ ಸರಣಿ ಎಎಮ್ಸಿ ಎಂಟರ್ಟೈನ್ಮೆಂಟ್ ಗೆ ಥಿಯೇಟರ್ ತೆರೆಯುವ ಜವಾಬ್ದಾರಿ ನೀಡಲಾಗಿದೆ.

ಮುಂದಿನ ಐದು ವರ್ಷಗಳಲ್ಲಿ 15 ನಗರಗಳಲ್ಲಿ 40ಕ್ಕೂ ಹೆಚ್ಚು ಥಿಯೇಟರ್ ತೆರೆಯಲು ನಿರ್ಧರಿಸಲಾಗಿದೆ. ಮೊದಲ ಥಿಯೇಟರ್ ರಾಜಧಾನಿ ರಿಯಾದಲ್ಲಿ ಶುರುವಾಗಲಿದೆ. ಥಿಯೇಟರ್ ಪ್ರವೇಶಕ್ಕೆ ಯಾವುದೇ ಲಿಂಗ ತಾರತಮ್ಯವಿರುವುದಿಲ್ಲ. ಮಹಿಳೆ-ಪುರುಷ ಒಟ್ಟಿಗೆ ಕುಳಿತು ಸಿನಿಮಾ ನೋಡಬಹುದು. ಅಗತ್ಯವೆನಿಸಿದ್ರೆ ಮಹಿಳೆ ಅಥವಾ ಪುರುಷರಿಗೆ ಪ್ರತ್ಯೇಕವಾಗಿ ಸಿನಿಮಾ ನೋಡಲು ಅವಕಾಶ ನೀಡುವುದಾಗಿ ಸಂಸ್ಥೆ ಹೇಳಿದೆ.

ತೈಲ ಬೆಲೆ ಇಳಿಕೆ ಸೌದಿ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ. ಸೌದಿ ಸ್ಥಿತಿ ಸುಧಾರಣೆಗೆ ಮುಂದಾಗಿರುವ ಸಲ್ಮಾನ್, ಕೇವಲ ತೈಲ ಅವಲಂಬನೆ ಬಿಟ್ಟು ಬೇರೆ ಆದಾಯದ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹೊಸ ಹೂಡಿಕೆದಾರರಿಗೆ ಅವಕಾಶ ನೀಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...