alex Certify
ಕನ್ನಡ ದುನಿಯಾ       Mobile App
       

Kannada Duniya

ಇಂತಹ ಕಾನೂನು ಜಾರಿಗೆ ತರ್ತಾರಂತೆ ನೋಡಿ..!

pak 123

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಏನೇನೋ ಕಾನೂನು ಜಾರಿಗೆ ಬರುತ್ತವೆ. ಕೆಲವೊಮ್ಮೆ ವಿವಾದಾತ್ಮಕ ಕಾನೂನು, ಮಸೂದೆ ಕೂಡ ಜಾರಿಗೆ ತರಲಾಗುತ್ತದೆ. ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರ್ಕಾರ ಮಹಿಳಾ ಸುರಕ್ಷತಾ ಮಸೂದೆ ಜಾರಿಗೆ ತರಲು ತೀರ್ಮಾನಿಸಿತ್ತು.

ಅದರಂತೆ, ಪಂಜಾಬ್ ವಿಧಾನಸಭೆಯಲ್ಲಿ ಅನುಮೋದನೆ ಪಡೆಯಲಾಗಿದ್ದ ಮಸೂದೆಯನ್ನು ಇಸ್ಲಾಂ ಸೈದ್ಧಾಂತಿಕ ಮಂಡಳಿ ತಿರಸ್ಕರಿಸಿತ್ತು. ಹೊಸ ಮಸೂದೆ ಜಾರಿಗೆ ಸರ್ಕಾರ ಸಲಹೆ, ವರದಿ ನೀಡುವಂತೆ ಇಸ್ಲಾಂ ಸೈದ್ಧಾಂತಿಕ ಮಂಡಳಿಗೆ ಸೂಚಿಸಿದ್ದು, ಅದರಂತೆ ಮಂಡಳಿ 163 ಪುಟ ಒಳಗೊಂಡ ವಿವಾದಾತ್ಮಕ ಮಸೂದೆಯ ಕರಡನ್ನು ಸಿದ್ಧಪಡಿಸಿ, ಪಂಜಾಬ್ ಸರ್ಕಾರಕ್ಕೆ ಸಲ್ಲಿಸಲು ಮುಂದಾಗಿದೆ. ಇದರಲ್ಲಿ ಏನೆಲ್ಲಾ ಇದೆ ನೋಡಿ.

ಪತಿಯ ಇಚ್ಛೆಗೆ ವಿರುದ್ಧವಾಗಿ ವರ್ತಿಸುವ ಮಹಿಳೆಯರಿಗೆ ಥಳಿಸಲು ಅವಕಾಶ ನೀಡಲಾಗಿದೆ. ಹೌದು, ಸಣ್ಣ ಪ್ರಮಾಣದಲ್ಲಿ ಪತ್ನಿ ಮೇಲೆ ಗಂಡ ಕೈ ಮಾಡಬಹುದಾಗಿದೆ. ಬುರ್ಖಾ ಧರಿಸದ, ಜೋರಾಗಿ ಮಾತನಾಡುವ, ಗಂಡನೊಂದಿಗೆ ಲೈಂಗಿಕ ಸಂಪರ್ಕಕ್ಕೆ ನಿರಾಕರಿಸುವ, ಗಂಡನ ಇಷ್ಟದಂತೆ ನಡೆದುಕೊಳ್ಳದ ಮಹಿಳೆಯನ್ನು ದಂಡಿಸಬಹುದೆಂದು ಹೇಳಲಾಗಿದೆ.

ಇಷ್ಟು ಮಾತ್ರವಲ್ಲ, ಬಾಲಕರೊಂದಿಗೆ ಶಾಲೆಗೆ ಹೋಗಬಾರದು. ಸೇನೆಯಲ್ಲಿ ಅವಕಾಶ ನೀಡಬಾರದು, ಆಗಂತುಕರೊಂದಿಗೆ ಮಾತನಾಡಬಾರದೆಂಬುದು ಸೇರಿದಂತೆ ಹಲವು ನಿರ್ಬಂಧಗಳನ್ನು ಒಳಗೊಂಡ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...