alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗರೇಟು ತುಣಕು ಎಸೆಯುವ ಮುನ್ನ ಇದನ್ನು ಓದಿ

lahore-20-jpeg__700x394_q85_subsampling-2

ಸೇದಿಬಿಟ್ಟ ಸಿಗರೇಟ್ ನಿಂದ ಏನು ಮಾಡಲು ಸಾಧ್ಯ? ಹಾಗಂತ ಸೇದಿಬಿಟ್ಟ ತುಣುಕನ್ನು ಎಸೆಯಬೇಡಿ. ಈ ಸಿಗರೇಟ್ ತುಣುಕಿಗೆ ಭಾರೀ ಬೇಡಿಕೆ ಬರುವ ಸಾಧ್ಯತೆಯಿದೆ. ಸಂಶೋಧನೆಯೊಂದು ಇದ್ರಿಂದ ರಸ್ತೆ ನಿರ್ಮಾಣ ಮಾಡಬಹುದು ಎಂದಿದೆ.

ಮೆಲ್ಬೋರ್ನ್ ವಿಶ್ವವಿದ್ಯಾನಿಲಯ ಈ ಬಗ್ಗೆ ಸಂಶೋಧನೆ ನಡೆಸಿದೆ. ಪರಿಸರಕ್ಕೆ ಹಾನಿ ಮಾಡುತ್ತಿರುವ ಈ ಸಿಗರೇಟ್ ತುಣುಕುಗಳನ್ನು ಡಾಂಬರ್ ರಸ್ತೆ ನಿರ್ಮಾಣಕ್ಕೆ ಬಳಸಬಹುದು ಎಂದಿದೆ. ಡಾಂಬರ್ ಜೊತೆ ಸಿಗರೇಟು ತುಣುಕುಗಳನ್ನು ಬೆರೆಸುವುದರಿಂದ ರಸ್ತೆ ಮತ್ತಷ್ಟು ಬಾಳಿಕೆ ಬರುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಅನೇಕ ವರ್ಷಗಳಿಂದ ಈ ಬಗ್ಗೆ ಸಂಶೋಧನೆ ನಡೆಯುತ್ತಿತ್ತು. ಸಿಗರೇಟಿನ ತುಣುಕನ್ನು ಮರುಬಳಕೆ ಮಾಡುವುದು ಹೇಗೆ ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿತ್ತು. ಈಗ ರಸ್ತೆ ನಿರ್ಮಾಣಕ್ಕೆ ಅದನ್ನು ಬಳಸಬಹುದೆಂಬ ವಿಷ್ಯ ತಿಳಿದುಬಂದಿದೆ. ವಿಶ್ವದಲ್ಲಿ ಒಂದು ವರ್ಷದಲ್ಲಿ ಸುಮಾರು 1.2 ಮಿಲಿಯನ್ ಟನ್ ಸಿಗರೇಟಿನ ತುಣುಕುಗಳು ಚರಂಡಿ ಸೇರುತ್ತವೆ. ಇದು ಪರಿಸರದ ಮೇಲೆ ಭಾರೀ ಹಾನಿಯುಂಟು ಮಾಡುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...