alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಚಾರಕ್ಕಾಗಿ ಈ ಯುವತಿ ಮಾಡಿದ್ದೇನು..?

monik

ಕೆಲವರಿಗೆ ವಿಚಿತ್ರ ಖಯಾಲಿ. ಹೇಗಾದರಾಗಲಿ, ಏನಾದರಾಗಲಿ, ಒಟ್ಟಿನಲ್ಲಿ ಸುದ್ದಿಯಾಗಬೇಕು. ಜನ ತಮ್ಮನ್ನು ಗುರುತಿಸಬೇಕು ಎಂಬ ಮನೋಭಾವ ಹೊಂದಿರುತ್ತಾರೆ. ಇಂತಹ ಮನೋಭಾವದವರು ಏನೆಲ್ಲಾ ಯಡವಟ್ಟು ಮಾಡುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ.

ಜನರನ್ನು ಸೆಳೆಯುವ ಉದ್ದೇಶದಿಂದ ಯುವತಿಯೊಬ್ಬಳು ಅರೆಬೆತ್ತಲೆ ಮಲಗಿದ್ದಲ್ಲದೇ, ತನ್ನ ಮೈಮೇಲೆ ಚಿಪ್ಸ್, ಟೊಮೊಟೋ ಕೆಚಪ್ ಸುರಿದುಕೊಂಡು ಅದನ್ನು ತಿನ್ನುವಂತೆ ಆಹ್ವಾನ ನೀಡಿದ್ದಾಳೆ. ಮಟಮಟ ಮಧ್ಯಾಹ್ನ ಈಕೆಗೇನಾಯ್ತೆಂದು ಅಲ್ಲಿದ್ದವರೆಲ್ಲಾ ಕಣ್ಣುಮಿಟುಕಿಸದೇ ಆಕೆಯನ್ನೇ ದಿಟ್ಟಿಸಿದ್ದಾರೆ. ಅಂದಹಾಗೇ ಇದು ನಡೆದಿರುವುದು ಅಮೆರಿಕದ ಟೆಕ್ಸಾಸ್ ಯುನಿವರ್ಸಿಟಿಯಲ್ಲಿ. ಇಲ್ಲಿ ಕಾರ್ಯನಿರ್ವಹಿಸುವ ಹಾಗೂ ಕಲಾವಿದೆಯೂ ಆಗಿರುವ ಯುವತಿ ಹೀಗೆ ಮಾಡಿದ್ದಾಳೆ.

ಮೋನಿಕಾ ರೋಸ್ಟೋವೋಲ್ಟ್ ಹೆಸರಿನ ಈ ಯುವತಿ ಯುನಿವರ್ಸಿಟಿ ಗೇಟ್ ಬಳಿ ಟೇಬಲ್ ಒಂದರ ಮೇಲೆ ಅರೆಬೆತ್ತಲೆ ಮಲಗಿದ್ದಲ್ಲದೇ, ಮೈಮೇಲೆ ತಿನಿಸು ಹಾಕಿಕೊಂಡು ಅವನ್ನು ತಿನ್ನುವಂತೆ ಆಹ್ವಾನ ನೀಡಿದ್ದಾಳೆ. ಅದನ್ನು ತಿನ್ನಲು ಅಲ್ಲಿದ್ದವರು ಮುಂದಾಗಿದ್ದರೆಂಬುದಂತೂ ಗೊತ್ತಾಗಿಲ್ಲ. ಒಟ್ಟಿನಲ್ಲಿ ಆಕೆಯಂತೂ ಸಖತ್ ಸುದ್ದಿಯಾಗಿದ್ದಾಳೆ. ತಾನು ಇದನ್ನು ಕಲೆಗಾಗಿ ಮಾಡಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದರೂ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಿದ್ದಂತೂ ಸುಳ್ಳಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...