alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಬಾಡಿಗೆಗೆ ಸಿಕ್ತಾರೆ ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್!

rent

ಹೊಸ ವರ್ಷದ ರಜೆ ಕಳೆಯಲು ಚೀನಾದಲ್ಲಿ ಎಲ್ಲರೂ ಕುಟುಂಬ ಸೇರಿಕೊಂಡಿದ್ದಾರೆ. ಆದ್ರೆ ಹಬ್ಬ ಬಂತು ಅಂದ್ರೆ ಯುವಕ, ಯುವತಿಯರಿಗೆಲ್ಲ ದೊಡ್ಡ ತಲೆನೋವು, ಜೊತೆಯಲ್ಲಿ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಇಲ್ಲ ಅಂದ್ರೆ ಸಂಬಂಧಿಕರ ಪ್ರವಚನ ಕೇಳಬೇಕಾಗುತ್ತೆ ಅನ್ನೋದು ಯುವಕ, ಯುವತಿಯರ ಆತಂಕ.

ಹಾಗಾಗಿಯೇ ಚೀನಾದಲ್ಲಿ ಪೋಷಕರನ್ನು ಖುಷಿಪಡಿಸಲು ನಕಲಿ ಪ್ರೇಮಿಗಳನ್ನು ಬಾಡಿಗೆಗೆ ಪಡೆಯೋ ಹೊಸ ಟ್ರೆಂಡ್ ಶುರುವಾಗಿದೆ.  ಇದಕ್ಕಾಗಿಯೇ ಮೊಬೈಲ್ ಆಪ್ ಕೂಡ ಬಂದಿದೆ, ಆಪ್ ಮೂಲಕವೇ ಹಣ ಪಾವತಿಸಿ ನಕಲಿ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಅನ್ನು ಬಾಡಿಗೆಗೆ ಪಡೆಯಬಹುದು.

1000 ಕ್ಕೂ ಹೆಚ್ಚುಮಂದಿ ಈಗಾಗ್ಲೇ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದು, ನ್ಯೂ ಇಯರ್ ಗಾಗಿ ಪ್ರೇಮಿಗಳನ್ನು ಹೈರ್ ಮಾಡಿಕೊಳ್ತಿದ್ದಾರೆ. ಡಿನ್ನರ್ ಡೇಟ್, ಚಾಟಿಂಗ್, ಗೇಮ್, ಮಸಾಜ್ ಹೀಗೆ ಎಲ್ಲವೂ ಇಲ್ಲಿದೆ. ‘ಹೈರ್ ಮಿ ಪ್ಲೀಸ್’ ಆಪ್ 2015 ರಲ್ಲೇ ಲಾಂಚ್ ಆಗಿದ್ದು, 7 ಲಕ್ಷ ಬಳಕೆದಾರರನ್ನು, 1.7 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...