alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ನಲ್ಲಿ ವಿಷಪೂರಿತ ಹಾವನ್ನು ತರಿಸಿಕೊಂಡಿದ್ಲು ಯುವತಿ…!

ವೈನ್ ಮಾಡಲು ಆನ್ ಲೈನ್ ನಲ್ಲಿ ವಿಷಕಾರಿ ಹಾವನ್ನು ತರಿಸಿ, ಆ ಹಾವಿನಿಂದಲೇ ಕಚ್ಚಿಸಿಕೊಂಡು ಯುವತಿ ಸಾವನ್ನಪ್ಪಿರುವ ಘಟನೆ ಚೀನಾದ ಶಾಂಕ್ಸಿಯಲ್ಲಿ ನಡೆದಿದೆ.

ದಕ್ಷಿಣ ಹಾಗೂ ಪಶ್ಚಿಮ ಚೀನಾ ಪ್ರಾಂತ್ಯದಲ್ಲಿ ವಿಷಕಾರಿ ಹಾವು ಹೆಚ್ಚಾಗಿ ಕಾಣಿಸುತ್ತವೆ. ಇದನ್ನು ಅರಿತಿದ್ದ 21 ವರ್ಷದ ಯುವತಿ ಹಾವನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದಳು. ಈ ವಿಷಕಾರಿ ಹಾವಿನ ವಿಷದಿಂದ ವೈನ್ ಮಾಡುವ ಇರಾದೆ ಮೃತ ಯುವತಿಯದ್ದಾಗಿತ್ತು. ಕೊರಿಯರ್ ಮೂಲಕ ಹಾವು ಯುವತಿಯ ಮನೆ ಬಾಗಿಲಿಗೆ ಬಂದಿತು. ಈ ಬಾಕ್ಸ್ ನಲ್ಲಿ ವಿಷಪೂರಿತ ಹಾವು ಇರುವ ಬಗ್ಗೆ ಕೊರಿಯರ್ ನವರಿಗೂ ಗೊತ್ತಿರಲಿಲ್ಲ.

ಬಾಕ್ಸ್ ಓಪನ್ ಮಾಡಿ ಹಾವಿನ ವಿಷದಿಂದ ವೈನ್ ಮಾಡುವ ಆಸೆ ಹೊಂದಿದ್ದ, ಯುವತಿಗೆ ಆಘಾತ ಕಾದಿತ್ತು. ವಿಷಕಾರಿ ಹಾವು ಯುವತಿಯನ್ನು ಕಚ್ಚಿದೆ. ಬಳಿಕ ಆ ಹಾವು ಯುವತಿ ಮನೆಯ ಹತ್ತಿರ ಪತ್ತೆಯಾಗಿದೆ.

ಯುವತಿಯ ತಾಯಿ ಹೇಳುವಂತೆ ವಿಷಪೂರಿತ ಹಾವಿನ ವಿಷದಿಂದ ಸಾಂಪ್ರದಾಯಿಕ ವೈನ್ ತಯಾರಿಸಬಹುದು. ಅಲ್ಲದೆ ಈ ವೈನ್ ಔಷಧಿಯ ಗುಣಗಳನ್ನು ಹೊಂದಿರುತ್ತದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...