alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಪಿಂಗ್ ಮಾಲ್ ನಲ್ಲೇ ಬೆತ್ತಲಾದ ಮಹಿಳೆ

ಬೀಜಿಂಗ್: ಚೀನಾದ ಮಹಿಳೆಯೊಬ್ಬಳು ಎಲ್ಲರೆದುರಲ್ಲೇ ಬೆತ್ತಲಾಗಿ ಅವಾಂತರ ಸೃಷ್ಠಿಸಿದ್ದಾಳೆ. ಜಿಯಾಂಗ್ ವೂ ಪ್ರಾಂತ್ಯದ ವೂಕ್ಸಿ ಸಿಟಿಯ ಶಾಪಿಂಗ್ ಮಾಲ್ ಒಂದರಲ್ಲಿ ಇಂತಹ ಘಟನೆ ನಡೆದಿದ್ದು, ಅಲ್ಲಿದ್ದವರೆಲ್ಲಾ ಹೌಹಾರಿದ್ದಾರೆ.

ಅಂದಹಾಗೇ, ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬಳು ಶಾಪಿಂಗ್ ಮಾಲ್ ಗೆ ಬಂದಿದ್ದಾಳೆ. ಅಲ್ಲಿ ಆಕಸ್ಮಿಕವಾಗಿ ಆಕೆಯ ಮಾಜಿ ಗಂಡನೂ ಎದುರಾಗಿದ್ದಾನೆ.

ಅಲ್ಲೇ ಇಬ್ಬರಿಗೂ ಜಗಳವಾಗಿದೆ. ಸಿಟ್ಟಿನ ಭರದಲ್ಲಿ ಗಂಡ, ನೀನು ಧರಿಸಿರುವ ಬಟ್ಟೆ ಮತ್ತು ಬಳಸುತ್ತಿರುವ ಮೊಬೈಲ್ ನನ್ನದು ಎಂದು ಹೇಳಿದ್ದಾನೆ.

ಈ ಮಾತನ್ನು ಕೇಳಿದ್ದೇ ತಡ ಮೊಬೈಲ್ ಆತನ ಕೈಗಿಟ್ಟ ಮಹಿಳೆ ಮೈಮೇಲಿದ್ದ ಬಟ್ಟೆಯನ್ನೆಲ್ಲಾ ಬಿಚ್ಚಿ ಮಾಜಿ ಗಂಡನ ಮುಖದ ಮೇಲೆ ಎಸೆದಿದ್ದಾಳೆ.

ಮಾಜಿ ಪತ್ನಿ ಜಗಳವಾಡುತ್ತಾ ಬೆತ್ತಲಾಗಿದ್ದನ್ನು ತಡೆಯಲು ಆಕೆಯ ಗಂಡ ಪ್ರಯತ್ನಿಸಿದರೂ, ಕೇಳುವ ಸ್ಥಿತಿಯಲ್ಲಿ ಆಕೆ ಇರಲಿಲ್ಲ.

ತಾಳ್ಮೆ ಕಳೆದುಕೊಂಡು ಬಟ್ಟೆಯನ್ನೆಲ್ಲಾ ಕಿತ್ತೆಸೆದು ಹೋಗಿದ್ದಾಳೆ. ಅಲ್ಲೇ ಬೇರೆ ಬಟ್ಟೆ ಧರಿಸಿದ್ದಾಳೆ. ಇದೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...