alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಾಪಾಯದಿಂದ ಯುವತಿ ಪಾರಾಗಿರುವ ದೃಶ್ಯ ನೋಡಿದ್ರೆ ಮೈ ಜುಮ್ ಎನ್ನುತ್ತೆ

ರಸ್ತೆ ಅಪಘಾತಗಳಲ್ಲಿ ಪಾರಾಗುವುದು ಎಂದರೆ, ಪೂರ್ವ ಜನ್ಮದ ಪುಣ್ಯ ಎಂದೇ ಹೇಳಬೇಕು. ಅದರಲ್ಲೂ ಟ್ರಕ್‌, ಲಾರಿ ಇನ್ನಿತರ ದೊಡ್ಡ ವಾಹನಗಳೆದುರು ಸ್ಕೂಟರ್‌, ಬೈಕ್‌ನಲ್ಲಿ ಸಾಗುವುದು ಇಂದಿನ ದಿನದಲ್ಲಿ ಅಪಾಯವೇ. ಚೀನಾದಲ್ಲಿ ಯುವತಿಯೊಬ್ಬಳು ಟ್ರಕ್‌ ಅಡಿಗೆ ಬಿದ್ದರೂ, ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾಳೆ.

ರಸ್ತೆಯ ತಿರುವಿನ ಬದಿಯಲ್ಲಿ ಸ್ಕೂಟರ್‌ನಲ್ಲಿ ಈಕೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಟ್ರಕ್‌, ತಿರುವಿನಲ್ಲಿ ಯುವತಿಯ ಮೇಲೆ ಸಾಗಿದೆ. ಈ ವೇಳೆ ಯುವತಿ ಹಾಗೂ ಸ್ಕೂಟರ್‌ ಚಕ್ರದಡಿಗೆ ಸಿಲುಕಿದ್ದರೂ ಯುವತಿ ಅದೃಷ್ಟವಷಾತ್‌ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾಳೆ.

ಈ ಪವಾಡ ಸದೃಶವಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೀಪಲ್ಸ್‌ ಡೇಲಿ ಚೀನಾ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ಚೀನಾದ ಗೌಂಗ್‌ಡೌಂಗ್‌ ಪ್ರಾಂತ್ಯದಲ್ಲಿ ನಡೆದಿದೆ. ಸ್ಕೂಟರ್‌ ಚಕ್ರದ ಅಡಿಗೆ ಸಿಲುಕಿದ ಕೂಡಲೇ ಚಾಲಕ ಟ್ರಕ್‌ ನಿಲ್ಲಿಸಿದ್ದಾನೆ. ಈ ವೇಳೆ ಯುವತಿ, ಹಿಂಭಾದಿಂದ ತನ್ನಷ್ಟಕ್ಕೇ ಎದ್ದು, ರಸ್ತೆ ಬದಿಗೆ ಸಾಗಿದ್ದಾಳೆ. ಸಿಸಿಟಿವಿ ದೃಶ್ಯ ಗಮನಿಸಿದರೆ ನಗೆ ಬರುವುದಾದರೂ, ಯುವತಿಯ ನಸೀಬು ಚೆನ್ನಾಗಿತ್ತೆಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...