alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿಬೀಳಿಸುವಂತಿದೆ ಚೀನಾ ಕಾರ್ಖಾನೆಯೊಂದರ ವಿಡಿಯೋ

ಚೀನಾದ ಕಾರ್ಖಾನೆಯೊಂದರಲ್ಲಿ ನಡೆದ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ. ಮಹಿಳೆಯೊಬ್ಬಳ ಕೂದಲು ಯಂತ್ರಕ್ಕೆ ಸಿಕ್ಕಿಹಾಕಿಕೊಂಡಿದ್ರಿಂದ ಅವಳ ತಲೆ ಸಂಪೂರ್ಣ ಬೋಳಾಗಿ ಬಿಟ್ಟಿದೆ. ಅಷ್ಟೇ ಅಲ್ಲ ಆಕೆಯ ತಲೆಗೆ ಗಾಯವಾಗಿದೆ.

ಫ್ಯಾಕ್ಟರಿಯೊಂದರಲ್ಲಿ ಮಹಿಳೆ ಯಂತ್ರದ ಕೆಳಗೆ ಬಗ್ಗಿಕೊಂಡು ಕೆಲಸ ಮಾಡುತ್ತಿದ್ಲು. ತನ್ನ ಕೂದಲು ಅದಕ್ಕೆ ಸಿಕ್ಕಿಹಾಕಿಕೊಳ್ಳಬಹುದು ಅನ್ನೋ ಕಲ್ಪನೆಯೂ ಅವಳಿಗೆ ಇರಲಿಲ್ಲ. ಇದ್ದಕ್ಕಿದ್ದಂತೆ ಕೂದಲನ್ನು ಸೆಳೆದುಕೊಂಡ ಮಷಿನ್, ತಲೆಯನ್ನೇ ಕೆತ್ತಿ ಹಾಕಿದೆ.

ಆಕೆ ಕೂಗಿಕೊಂಡ್ಲು, ಪಕ್ಕದಲ್ಲೇ ಇದ್ದ ಸಹೋದ್ಯೋಗಿ ತಕ್ಷಣ ಮಷಿನ್ ಆಫ್ ಮಾಡಿದ್ದ. ಇಲ್ಲದೇ ಹೋದಲ್ಲಿ ಆಕೆಯ ತಲೆ ಪೂರ್ತಿಯಾಗಿ ನುಜ್ಜುಗುಜ್ಜಾಗುವ ಸಾಧ್ಯತೆಯೂ ಇತ್ತು. ಮಹಿಳೆಯನ್ನು ನಿಧಾನವಾಗಿ ಹೊರಕ್ಕೆ ಕರೆದುಕೊಂಡು ಬಂದು ಆತ ಉಪಚರಿಸಿದ್ದಾನೆ.

ಅವಳ ತಲೆಯಿಂದ ರಕ್ತ ಸೋರುತ್ತಿತ್ತು, ಕೂದಲು ಪೂರ್ತಿಯಾಗಿ ಯಂತ್ರಕ್ಕೆ ಸಿಕ್ಕು ಕತ್ತರಿಸಿ ಹೋಗಿತ್ತು, ತಲೆ ಬೋಳಾಗಿತ್ತು. ಈ ವಿಡಿಯೋ ಯುಟ್ಯೂಬ್ ನಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...