alex Certify
ಕನ್ನಡ ದುನಿಯಾ       Mobile App
       

Kannada Duniya

ವಿಷ ಕಾರುವ ಸರ್ಪವೇ ಇವರಿಗೆ ಆದಾಯದ ಮೂಲ..!

snake-farming

ನಮ್ಮ ಸುತ್ತ ಮುತ್ತ ಸಾಮಾನ್ಯವಾಗಿ ನಾವು ಕೋಳಿ, ಕುರಿ, ಹಸು, ಹಂದಿ ಇಂತಹ ಪ್ರಾಣಿಗಳನ್ನು ಸಾಕಿ ಅದರಿಂದ ಆದಾಯ ಕಂಡುಕೊಳ್ಳುವವರನ್ನು ನೋಡುತ್ತೇವೆ. ಆದರೆ ಚೀನಾದ ಜಿಸಿಕಿಯಾವೋ ಎನ್ನುವ ಊರಲ್ಲಿ  ಹಾವನ್ನು ಸಾಕುವುದೇ ಒಂದು ಬೃಹತ್ ಉದ್ಯಮ. ಅದೂ ಕೇವಲ ಯಾವುದೋ ಸಾಧಾರಣ ಹಾವಲ್ಲ. ನಾಗರ ಸರ್ಪದಿಂದ ಹಿಡಿದು ಕಾರ್ಕೋಟಕ ವಿಷ ಉಗುಳುವ ಕಾಳಿಂಗ ಸರ್ಪದ ತನಕ ವಿವಿಧ ರೀತಿಯ ವಿಷಪೂರಿತ ಹಾವುಗಳು ಜಿಸಿಕಿಯಾವೋ ಊರಿನ ಜನರ ಸುಪರ್ದಿಯಲ್ಲಿವೆ.

ಕೇವಲ ಒಂದು ಸಾವಿರ ಜನರನ್ನು ಹೊಂದಿರುವ ಪುಟ್ಟ ಊರು ಈ ಜಿಸಿಕಿಯಾವೋ. ಊರೇನೋ ಪುಟ್ಟದಿದೆ ಆದರೆ ಇದು ಅಕ್ಷರಶಃ ಹಾವಿನ ಸಾಮ್ರಾಜ್ಯವೇ ಸರಿ. ಏಕೆಂದರೆ ಈ ಊರಿನಲ್ಲಿ ವರ್ಷಕ್ಕೆ ಸುಮಾರು 3 ಲಕ್ಷ ಸರ್ಪಗಳನ್ನು ಉತ್ಪಾದಿಸಲಾಗುತ್ತದೆ. ಎಲ್ಲವೂ ವಿಷದ ಹಾವುಗಳೇ!!!

ಕೋಬ್ರಾ, ವೈಪರ್ ನಂತಹ ಪ್ರಾಣಾಂತಕ ಸರ್ಪದಿಂದ ಹಿಡಿದು ಕಚ್ಚಿಸಿಕೊಂಡವ ಐದು ಹೆಜ್ಜೆ ಇಡುವ ಒಳಗಾಗಿ ಮರಣಿಸುವ ಫೈವ್ ಸ್ಟೆಪ್ ಎನ್ನುವ ಅಪರೂಪದ ವಿಷದ ಹಾವುಗಳನ್ನು ಸಹ ಅಲ್ಲಿ ಸಾಕಲಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಸಾವು ಕಟ್ಟಿಟ್ಟ ಬುತ್ತಿ. ಈ ಕಾರಣಕ್ಕಾಗಿಯೇ ಬಹಳ ಎಚ್ಚರಿಕೆಯಿಂದ ಸ್ನೇಕ್ ಫಾರ್ಮನ್ನು ನಿರ್ವಹಿಸಲಾಗುತ್ತದೆ.

ಸ್ನೇಕ್ ಫಾರ್ಮಿಂಗ್ ಹಿನ್ನಲೆ:

ಜಿಸಿಕಿಯಾವೋ ಊರಲ್ಲಿ ಮೊದಲು ಚೀನಾದ ಇತರ ಪ್ರಾಂತ್ಯಗಳಂತೆ ಸೆಣಬು, ಟೀ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಅನೇಕ ವರ್ಷಗಳ ಹಿಂದೆ ಜಿಸಿಕಿಯಾವೋ ದ ಯಾಂಗ್ ಹೊಂಗ್ ಚೌಂಗ್ ಎಂಬ ರೈತ, ಬಡತನ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ. ಯಾವ ಔಷಧಿಗೂ ಆತನ ರೋಗ ಬಗ್ಗುತ್ತಿರಲಿಲ್ಲ. ಒಂದು ದಿನ ಕಾಡಿನಿಂದ ಸರ್ಪವೊಂದನ್ನು ಹಿಡಿದು ತಂದು ಅದರಿಂದ ಮಾಡಿದ ಔಷಧದಿಂದ ಆತ ಗುಣಮುಖನಾದ. ನಂತರ ಹಾವು ಹಿಡಿದು ಔಷಧ ತಯಾರಿಸುವುದೇ ಆತನ ಪ್ರಮುಖ ಉದ್ಯೋಗವಾಯ್ತು. ಜೊತೆಗೆ ಒಳ್ಳೆಯ ಆದಾಯವನ್ನೂ ಗಳಿಸುತ್ತಿದ್ದ. ಹಾವು ಸಾಕುವುದು ಲಾಭದ ಉದ್ಯಮವೆಂದು ಕಂಡುಕೊಂಡ ಅಕ್ಕಪಕ್ಕದವರು ಯಾಂಗ್ ನಂತೆ ಹಾವು ಸಾಕಾಣಿಕೆಯನ್ನೇ ತಮ್ಮ ಉದ್ಯೋಗವನ್ನಾಗಿ ಮಾಡಿಕೊಂಡರು.

ಚೀನಾದಲ್ಲಿ ಹಾವಿನ ಮಾಂಸಕ್ಕೆ ವಿಪರೀತ ಬೇಡಿಕೆ ಇದೆ. ಅಲ್ಲದೆ ಹಾವಿನ ತಲೆ ಭಾಗವನ್ನು ಔಷಧಗಳಲ್ಲಿ ಉಪಯೋಗಿಸಲಾಗುತ್ತದೆ. ಹಾಗಾಗಿ ಸ್ನೇಕ್ ಫಾರ್ಮಿಂಗ್ ಇವರಿಗೆ ಲಾಭದಾಯಕ ಉದ್ದಿಮೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...