alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣಗಳಲ್ಲಿ ವೈರಲ್ ಆಗಿದೆ ಈ ಫೋಟೋ..!

chinese-school-uses-newspaper-hats-to-prevent-cheating-in-examsಪರೀಕ್ಷಾ ಅಕ್ರಮ ತಡೆಗಟ್ಟಲು ಚೀನಾದ ಶಾಲೆಯೊಂದು ಅನುಸರಿಸಿರುವ ಹೊಸ ವಿಧಾನದ ಫೋಟೋವೊಂದು ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ಕೆಲವರು ತಮಾಷೆ ಮಾಡಿದ್ದರೆ ಮತ್ತೆ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ನ್ಯೂಸ್ ಪೇಪರ್ ಹ್ಯಾಟ್ ಹಾಕಿಸಲಾಗಿದ್ದು, ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚೀನಾದ ಅನ್ ಹುಯಿ ಪ್ರಾಂತ್ಯದ ಶಾಲೆ, ಪರೀಕ್ಷಾ ಅಕ್ರಮ ತಡೆಗಟ್ಟಲು ಇಂತಹ ವಿಧಾನಕ್ಕೆ ಮೊರೆ ಹೋಗಿದೆ.

ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಶಾಲೆ, ಇದರಿಂದ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದಲ್ಲದೇ ಅವರುಗಳ ಉತ್ತರ ಪತ್ರಿಕೆಯನ್ನು ಅಕ್ಕಪಕ್ಕದವರು ನೋಡುವುದು ತಪ್ಪುತ್ತದೆ ಎಂದು ಹೇಳಿದೆ. ಆದರೆ ಶಾಲೆ ಕೈಗೊಂಡಿರುವ ಕ್ರಮ ಮಾತ್ರ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...