alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ಆರಂಭದ ದಿನ ಪುಟ್ಟ ಮಕ್ಕಳ ಮುಂದೆ ಪೋಲ್ ಡ್ಯಾನ್ಸ್

ಶಾಲಾ ಆರಂಭದ ಮೊದಲ ದಿನ, ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಸೆಳೆಯಲು, ಆಟಿಕೆ, ತಿಂಡಿ, ಚಾಕಲೇಟ್ ಗಳನ್ನು ನೀಡಿದನ್ನು ನೋಡಿದ್ದೇವೆ. ಚೀನಾದ ಒಂದು ಶಾಲೆಯಲ್ಲಿ ಪುಟ್ಟ ಮಕ್ಕಳ ಮುಂದೆ ಪೋಲ್ ಡ್ಯಾನ್ಸ್ ಆಯೋಜನೆ ಮಾಡಿದ್ದು, ಇದನ್ನು ಕಂಡು ಪೋಷಕರು ಬೆಚ್ಚಿ ಬಿದ್ದಿದ್ದಾರೆ.

ಹೌದು….ಚೀನಾದ ಶೆನ್ಜೆನ್ ಪ್ರಾಂತ್ಯದ ಶಿನ್‍ ಶಾಹ್ಯೂ ಶಿಶುವಿಹಾರ ಮಕ್ಕಳನ್ನು ಬರ ಮಾಡಿಕೊಳ್ಳಲು ಸಕಲ ರೀತಿಯಿಂದಲೂ ಸಿದ್ಧವಾಗಿತ್ತು. ಮಕ್ಕಳು ಸಹ ಬಿಳಿ ಅಂಗಿ, ಕಪ್ಪು ಚಡ್ಡಿ ತೊಟ್ಟು ಪೋಷಕರೊಂದಿಗೆ ಶಾಲೆಗೆ ಬಂದಿದ್ರು. ಶಾಲೆಯ ಆವರಣದಲ್ಲಿ ಒಬ್ಬ ಯುವತಿ ಕಪ್ಪು ಬಣ್ಣದ ಟಾಪ್, ಹಾಫ್ ಪ್ಯಾಂಟ್ ಹಾಗೂ ಸ್ಯಾಂಡಲ್ ತೊಟ್ಟು ಪೋಲ್ ಡ್ಯಾನ್ಸ್ ಮಾಡ್ತಾ ಇದ್ದಳು.

ಇದನ್ನು ಕಂಡು ಕೆಲ ಬಾಲಕರು ಏನೂ ಅರಿಯದೆ ಕಣ್ಣರಳಿಸಿದ್ರೆ, ಇನ್ನು ಕೆಲವರು ಅವಳು ಮಾಡುವ ನೃತ್ಯ ನೋಡ್ತಾ ನಿಂತರು. ಕೆಲ ಪೋಷಕರು ತಮ್ಮ ಮಕ್ಕಳು ಈ ಡ್ಯಾನ್ಸ್ ನೋಡದಂತೆ ತಡೆಯುವಲ್ಲಿ ಸಫಲರಾದ್ರು. ಶಿಶುವಿಹಾರದಲ್ಲಿ ಈ ರೀತಿ ಪೋಲ್ ಡ್ಯಾನ್ಸ್ ಆಯೋಜನೆ ಮಾಡಿದ್ದರ ವಿರುದ್ಧ ಈಗ ಟೀಕೆಗಳು ಕೇಳಿ ಬಂದವು.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಶಾಲಾ ಆಡಳಿತ ಮಂಡಳಿ, ಶಾಲೆಯಲ್ಲಿ ಇಂತಹ ನೃತ್ಯ ಕಲಿಸೋದಿಲ್ಲ. ಮನೋರಂಜನೆಗೆ ಈ ನೃತ್ಯ ಆಯೋಜಿಸಲಾಗಿತ್ತು. ಶಾಲಾ ಆಡಳಿತ ಮಂಡಳಿ ಭಿನ್ನ ಪ್ರಯೋಗ ಮಾಡಿತ್ತು. ಇದ್ರಿಂದ ಪೋಷಕರಿಗೆ ತೊಂದರೆ ಆಗಿದ್ದರೆ ಕ್ಷಮೆ ಯಾಚಿಸೋದಾಗಿ ತಿಳಿಸಿದೆ. ಪೋಲ್ ಡ್ಯಾನ್ಸ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...