alex Certify
ಕನ್ನಡ ದುನಿಯಾ       Mobile App
       

Kannada Duniya

ಜನನಿಬಿಡ ಕಾರ್ಯಕ್ರಮದಲ್ಲಿ ಎದುರಾದ ಪೊಲೀಸರನ್ನು ಕಂಡು ಶಾಕ್ ಆದ ಪಾತಕಿ

ಆಧುನಿಕ ತಂತ್ರಜ್ಞಾನವನ್ನು ಬಳಸಿ ಚೀನಾದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬನನ್ನು ಬಂಧಿಸಲಾಗಿದೆ. ಫೇಶಿಯಲ್ ರೆಕಗ್ನಿಶನ್ ಟೆಕ್ನಾಲಜಿ ಮೂಲಕ ಜನನಿಬಿಡ ಮ್ಯೂಸಿಕ್ ಕಾನ್ಸರ್ಟ್ ನಲ್ಲಿ ಆತನನ್ನು ಬಂಧಿಸಲಾಗಿದೆ.

ಕ್ಸಿಯಾಂಗ್ಸಿಯಲ್ಲಿ ನಡೆದ ಜಾಕಿ ಚ್ಯೂಂಗ್ ಕಾನ್ಸರ್ಟ್ ನೋಡಲು ಆತ ಬಂದಿದ್ದ. ಸೆಕ್ಯೂರಿಟಿ ಕ್ಯಾಮರಾಗಳು ಆತನನ್ನು ಪತ್ತೆ ಮಾಡಿವೆ. ಪೊಲೀಸರಿಂದ ತಪ್ಪಿಸಿಕೊಳ್ಳಲೆಂದೇ 90 ಕಿಮೀ ದೂರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಬಂದಿದ್ದ.

50,000 ಜನ ಸೇರಿದ್ದರಿಂದ ತನಗೆ ಯಾವುದೇ ಅಪಾಯವಿಲ್ಲ ಎಂದುಕೊಂಡಿದ್ದ. ಆದ್ರೆ ಕೋಳ ಹಿಡಿದು ಎದುರಲ್ಲೇ ಪ್ರತ್ಯಕ್ಷರಾದ ಪೊಲೀಸರನ್ನು ನೋಡಿ ಅಕ್ಷರಶಃ ಶಾಕ್ ಆಗಿದ್ದಾನೆ. ಚೀನಾದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕ್ರಿಮಿನಲ್ ಗಳನ್ನು ಹಿಡಿಯಲು ಫೇಶಿಯಲ್ ರೆಕಗ್ನಿಶನ್ ತಂತ್ರಜ್ಞಾನ ಬಳಸಲಾಗುತ್ತಿದೆ.

ಕ್ರಿಮಿನಲ್ ಗಳನ್ನು ಗುರುತು ಹಿಡಿಯಬಲ್ಲ ಸ್ಮಾರ್ಟ್ ಗ್ಲಾಸ್ ಗಳನ್ನು ಕೂಡ ಪೊಲೀಸರಿಗೆ ವಿತರಿಸಲಾಗಿದೆ. ಈ ರೀತಿ 7 ಮಂದಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳನ್ನು ಈಗಾಗ್ಲೇ ಬಂಧಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...