alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟಕ್ಕಾಗಿ ವಿಮಾನದಲ್ಲಿ ಆಕೆ ಮಾಡಿದ್ದೇನು..?

china-woman-throws-coins-into-plane-engine_650x400_41498569739-1

ಅಂಧವಿಶ್ವಾಸವುಳ್ಳ ಪ್ರಯಾಣಿಕಳಿಂದಾಗಿ ಚೀನಾದಲ್ಲಿ ವಿಮಾನ ಹಾರಾಟ ವಿಳಂಬವಾಗಿದೆ. ಈ ವಿಮಾನ ಶಾಂಘೈನಿಂದ ಗುವಾಂಗ್ಝೌಗೆ ತೆರಳಬೇಕಿತ್ತು. ಈ ವಿಮಾನದಲ್ಲಿ 150 ಪ್ರಯಾಣಿಕರಿದ್ರು. ವಿಮಾನ ಇನ್ನೇನು ಟೇಕಾಫ್ ಆಗಬೇಕು ಎನ್ನುವಷ್ಟರಲ್ಲಿ ಮಹಿಳೆಯೊಬ್ಬಳು ನಾಣ್ಯವನ್ನು ವಿಮಾನದ ಎಂಜಿನ್ ನಲ್ಲಿ ಹಾಕಿದ್ದಾಳೆ.

china-woman-throws-coins-into-plane-engine_650x400_41498569837

ಹೀಗೆ ಮಾಡಿದ್ರೆ ಅದೃಷ್ಟ ಬರುತ್ತೆ ಅನ್ನೋದು 80 ವರ್ಷದ ವೃದ್ಧೆಯ ನಂಬಿಕೆಯಾಗಿತ್ತು. ಒಟ್ಟು 9 ನಾಣ್ಯಗಳನ್ನು ಮಹಿಳೆ ವಿಮಾನದ ಎಂಜಿನ್ ನೊಳಕ್ಕೆ ಹಾಕಿದ್ದಳು. ಇದನ್ನು ಗಮನಿಸಿದ ಪ್ರಯಾಣಿಕರು ಸಿಬ್ಬಂದಿಗೆ ಮಾಹಿತಿ ನೀಡಿದ್ರು. ಮಹಿಳೆಯನ್ನು ಶಾಂಘೈ ಏರ್ಪೋರ್ಟ್ ನಲ್ಲೇ ಪೊಲೀಸರು ಬಂಧಿಸಿದ್ದಾರೆ.

ವೃದ್ಧೆ ತನ್ನ ಪತಿ, ಮಗಳು ಮತ್ತು ಅಳಿಯನ ಜೊತೆಗೆ ಪ್ರಯಾಣಿಸುತ್ತಿದ್ಲು. ವಿಮಾನದ ಸಿಬ್ಬಂದಿ ಎಲ್ಲಾ ನಾಣ್ಯಗಳನ್ನು ಹುಡುಕಿ ತೆಗೆದಿದ್ದಾರೆ. ನಂತರ ಎಂಜಿನ್ ಅನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಿದ ಬಳಿಕ ವಿಮಾನ ಟೇಕಾಫ್ ಆಯ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...