alex Certify
ಕನ್ನಡ ದುನಿಯಾ       Mobile App
       

Kannada Duniya

ವಾಷಿಂಗ್ ಮೆಷೀನ್ ರಿಪೇರಿ ಮಾಡಲೋದವನ ಫಜೀತಿ

head in washing machineಮನೆಯಲ್ಲಿನ ಯಾವುದಾದರೊಂದು ಯಂತ್ರ ಕೆಟ್ಟು ಹೋದಾಗ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳನ್ನು ಸ್ವತಃ ಮಾಡುವುದು ಒಳ್ಳೆಯದೇ. ಆದರೆ ರಿಪೇರಿ ಕೆಲಸ ಗೊತ್ತಿಲ್ಲದಿದ್ದರೂ ಸ್ವಯಂ ತಾವೇ ಸರಿಪಡಿಸಲು ಮುಂದಾದರೇ ಏನಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆ.

ಚೀನಾದ ಫುಜಿಯಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಬಟ್ಟೆಗಳನ್ನು ವಾಶ್ ಮಾಡಲು ಮುಂದಾಗಿದ್ದಾನೆ. ಆದರೆ ವಾಷಿಂಗ್ ಮೆಷೀನ್ ಕಾರ್ಯ ನಿರ್ವಹಿಸದಿರುವುದನ್ನು ಕಂಡು ಸ್ವತಃ ತಾನೇ ರಿಪೇರಿ ಮಾಡಲು ಮುಂದಾಗಿದ್ದಾನೆ.

ವಾಷಿಂಗ್ ಮೆಷೀನ್ ಡ್ರಮ್ ನಲ್ಲಿ ಸಮಸ್ಯೆ ಇರಬಹುದೆಂದು ಭಾವಿಸಿ ನೋಡಲೋದವನು ತನ್ನ ತಲೆಯನ್ನು ಅದರಲ್ಲಿ ಸಿಲುಕಿಸಿಕೊಂಡಿದ್ದಾನೆ. ಎಷ್ಟೇ ಪ್ರಯತ್ನಪಟ್ಟರೂ ತಲೆ ಹೊರ ತೆಗೆಯಲಾಗಿಲ್ಲ. ಈತನ ನರಳಾಟ ಕೇಳಿ ಮತ್ತೊಂದು ರೂಮಿನಲ್ಲಿದ್ದ ಆತನ ಸ್ನೇಹಿತ ಓಡಿ ಬಂದಿದ್ದಾನೆ. ಆತ ಗೆಳೆಯನ ತಲೆಯನ್ನು ಹೊರ ತೆಗೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ.

ಕೊನೆಗೆ ವಿಧಿಯಿಲ್ಲದೇ ತುರ್ತು ವಿಪತ್ತು ನಿರ್ವಹಣಾ ಘಟಕಕ್ಕೆ ಫೋನ್ ಮಾಡಿದ್ದಾನೆ. ತಕ್ಷಣವೇ ಆಗಮಿಸಿದ ಅವರು ತಲೆ ಸಿಕ್ಕಿಸಿಕೊಂಡವನಿಗೆ ಯಾವುದೇ ತೊಂದರೆಯಾಗದಂತೆ ಇಡೀ ವಾಷಿಂಗ್ ಮೆಷೀನ್ ಅನ್ನೇ ಕತ್ತರಿಸಿ ಹಾಕಿದ್ದಾರೆ. ಕೊನೆಗೂ ಸಣ್ಣ ಪುಟ್ಟ ತರಚು ಗಾಯಗಳೊಂದಿಗೆ ವ್ಯಕ್ತಿ ಸುರಕ್ಷಿತವಾಗಿ ಹೊರ ಬಂದಿದ್ದಾನೆ. ವಾಷಿಂಗ್ ಮೆಷೀನ್ ನಲ್ಲಿ ಆತ ತಲೆ ಸಿಕ್ಕಿಸಿಕೊಂಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...