alex Certify
ಕನ್ನಡ ದುನಿಯಾ       Mobile App
       

Kannada Duniya

ಹಂದಿಯ ಪಿತ್ತಗಲ್ಲು ಪತ್ತೆಮಾಡಿ ಕೋಟ್ಯಾಧೀಶನಾದ ರೈತ

ದಿಢೀರ್ ಅಂತಾ ಯಾವುದಾದ್ರೂ ಖಜಾನೆ ಸಿಕ್ಕಿ ಕೋಟ್ಯಾಧೀಶನಾಗಬೇಕು ಅಂತಾ ಎಲ್ಲರೂ ಕನಸು ಕಾಣ್ತಾರೆ. ಖಜಾನೆ ಬದಲು ಪಿತ್ತಗಲ್ಲು ಸಿಕ್ರೆ ಹೇಗಿರುತ್ತೆ ಹೇಳಿ? ಏನೂ ಪ್ರಯೋಜನಕ್ಕೆ ಬರುವುದಿಲ್ಲ ಅಂತಾ ಜನ ಅದನ್ನು ಬಿಸಾಡ್ತಾರೆ.

ಆದ್ರೆ ಚೀನಾದಲ್ಲಿ ವ್ಯಕ್ತಿಯೊಬ್ಬ ಇದೇ ಪಿತ್ತ ಕಲ್ಲಿನಿಂದ ಕೋಟ್ಯಾಧೀಶನಾಗಿದ್ದಾನೆ. ಹೊಲದಲ್ಲಿ ಕೆಲಸ ಮಾಡ್ತಿದ್ದಾಗ 8 ವರ್ಷದ ಬಾಲಕನಿಗೆ ಪಿತ್ತಗಲ್ಲು ಸಿಕ್ಕಿತ್ತು. ಅದು ಮನುಷ್ಯರದ್ದಾಗಿರಲಿಲ್ಲ, ಹಂದಿಯ ದೇಹದೊಳಗಿದ್ದ ವಸ್ತುವಾಗಿತ್ತು. ಮೊದಲು ಹೊಲದ ಮಾಲೀಕನಿಗೆ ಅದರ ಮೌಲ್ಯದ ಅರಿವಿರಲಿಲ್ಲ.

4 ಇಂಚು ಉದ್ದ, 2.5 ಇಂಚು ಅಗಲದ ವಸ್ತು ಕೂದಲಿನಿಂದ ಆವೃತವಾಗಿತ್ತು. ಇದನ್ನು ಬೀಜಾರ್ ಅಂತಾನೂ ಕರೆಯಲಾಗುತ್ತದೆ. ತಜ್ಞರ ಪ್ರಕಾರ ಈ ಹಂದಿಯ ಪಿತ್ತ ಕಲ್ಲಿನ ಮೌಲ್ಯ ಸುಮಾರು 8.7 ಕೋಟಿ ರೂಪಾಯಿ. ಇದು ಸಿಗುವುದು ತೀರಾ ವಿರಳ.

ಇದನ್ನು ಚೀನಾದ ಔಷಧಗಳಲ್ಲಿ ಬಳಸಲಾಗುತ್ತದೆ. ದೇಹದಲ್ಲಿನ ಟಾಕ್ಸಿನ್ ಗಳನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ. ಆದ್ರೆ ಇದು ಹಂದಿಯ ಹೊಟ್ಟೆಯಿಂದ ಹೊರಬಿದ್ದಿದ್ರೆ ಅದಕ್ಕೆ ಬೆಲೆ ಇಲ್ಲವಂತೆ, ಮೂತ್ರಕೋಶದಿಂದ ಹೊರಬಿದ್ದಿದ್ದಾದ್ರೆ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...