alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ತಪ್ಪಿಸಿಕೊಳ್ಳಲು ಫ್ಲೈ ಓವರ್ ನಿಂದ ಹಾರಿದ ಭೂಪ

ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ತಪ್ಪಿಸಿಕೊಳ್ಳಲು ಹೋದ ವ್ಯಕ್ತಿ ಕಾಲು ಮುರಿದುಕೊಂಡ ಘಟನೆ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ನಡೆದಿದೆ.

ವ್ಯಕ್ತಿ ಕುಡಿದು ವಾಹನ ಚಾಲನೆ ಮಾಡುತ್ತಿದ್ದ. ಬಿಳಿ ಬಣ್ಣದ ಕಾರ್ ನೊಂದಿಗೆ ಫ್ಲೈ ಓವರ್ ನಲ್ಲಿ ಡ್ರೈವ್ ಮಾಡಿಕೊಂಡ ಹೊರಟಿದ್ದ ವ್ಯಕ್ತಿಗೆ, ಕೊಂಚ ದೂರದಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿರುವುದು ಕಂಡುಬಂದಿದೆ. ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ನಿಂದ ತಪ್ಪಿಸಿಕೊಳ್ಳಲು ಆ ವ್ಯಕ್ತಿ ಪ್ಲಾನ್ ಮಾಡಿಕೊಂಡಿದ್ದಾನೆ.

ಅದ್ರಂತೆ ಕಾರ್ ನ್ನು ಫ್ಲೈ ಓವರ್ ಮೇಲೆ ಬಿಟ್ಟು, ನಡೆಯುತ್ತಾ, ಒಂದು ರಸ್ತೆಯಿಂದ ಇನ್ನೊಂದು ರಸ್ತೆ ದಾಟಿ ಸಾಗಿದ್ದಾನೆ. ನಂತರ ಬೇರೆಯವರ ಬಳಿ ಲಿಫ್ಟ್ ಕೇಳಿದ್ದಾನೆ. ಯಾರು ಗಾಡಿ ನಿಲ್ಲಿಸದೇ ಇದ್ದಾಗ, ಫ್ಲೈ ಓವರ್ ಗೋಡೆ ಎಗರಿದ್ದಾನೆ. ಪರಿಣಾಮ ವ್ಯಕ್ತಿಯ ಕಾಲು ಮುರಿದಿದೆ.

ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ಗೆ ಹೆದರಿ ವ್ಯಕ್ತಿ ಈ ರೀತಿ ಮಾಡಿಕೊಂಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...