alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದಲ್ಲಿ ತನ್ನ ನಾಗರಿಕರಿಗಾಗಿ ಕಾಲೋನಿ ಮಾಡ್ತಿದೆ ಚೀನಾ…!

ಪಾಕಿಸ್ತಾನದ ಗ್ವಾದರ್ ನಲ್ಲಿ ಚೀನಾ ವಿನೂತನ ಕೆಲಸಕ್ಕೆ ಕೈ ಹಾಕಿದೆ. ತನ್ನ ದೇಶದ ನಾಗರಿಕರಿಗಾಗಿ ಪಾಕಿಸ್ತಾನದ ಗ್ವಾದರ್ ನಲ್ಲಿ ಪ್ರತ್ಯೇಕ ಕಾಲೋನಿ ನಿರ್ಮಾಣ ಮಾಡ್ತಿದೆ. ಈ ಕಾಲೋನಿಯಲ್ಲಿ ಕೇವಲ ಚೀನಾ ಪ್ರಜೆಗಳು ಮಾತ್ರ ವಾಸವಾಗಲಿದ್ದಾರೆ. ವಸಾಹುತುಶಾಹಿ ಯುಗ ಮತ್ತೆ ಶುರುವಾಗುವಂತೆ ಕಾಣ್ತಿದೆ.

ಪಾಕಿಸ್ತಾನದಲ್ಲಿ ಐದು ಲಕ್ಷಕ್ಕೂ ಹೆಚ್ಚು ಮಂದಿ ಚೀನಾ ನಾಗರಿಕರಿದ್ದಾರೆ. ಚೀನಾ ಈಗಾಗಲೇ ಮಧ್ಯ ರಷ್ಯಾ ಹಾಗೂ ಆಫ್ರಿಕಾದಲ್ಲಿ ಉಪನಗರ ನಿರ್ಮಾಣ ಮಾಡಿದೆ. ಪೂರ್ವ ರಷ್ಯಾ ಹಾಗೂ ಉತ್ತರ ಮ್ಯಾನ್ಮಾರ್ ನಲ್ಲಿಯೂ ಭೂಮಿ ಖರೀದಿ ಮಾಡಿದೆ ಎಂಬ ಮಾತುಗಳಿವೆ.

ಚೀನಾದ ಈ ಉಪನಗರ ನಿರ್ಮಾಣ ಸ್ಥಳೀಯ ಜನರ ಅಸಂತೋಷಕ್ಕೆ ಕಾರಣವಾಗಿದೆ. ಸುಮಾರು 51 ಮಿಲಿಯನ್ ಡಾಲರ್ ನಲ್ಲಿ ಈ ಕಾಲೋನಿ ನಿರ್ಮಾಣವಾಗ್ತಿದೆ. 2022 ರ ವೇಳೆಗೆ ವಾಸಕ್ಕೆ ಇದು ಯೋಗ್ಯವಾಗಲಿದೆ. ಚೀನಾ, ಪಾಕಿಸ್ತಾನದಲ್ಲಿರುವ 5 ಲಕ್ಷ ಚೀನಿಯರಿಗೆ ಮನೆ ನಿರ್ಮಾಣ ಮಾಡಿಕೊಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...