alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಯುವತಿಯ ಮದುವೆಗೆ ಬಂದವರೆಲ್ಲ ನಕಲಿ..!

fake

ಸಾಮಾನ್ಯವಾಗಿ ಮದುವೆಗೂ ಮೊದಲು ವಧು-ವರರ ಪೋಷಕರು, ಹತ್ತಿರದ ಸಂಬಂಧಿಗಳು ಪರಸ್ಪರ ಭೇಟಿಯಾಗ್ತಾರೆ. ಔತಣ ಕೂಟದ ಹೆಸರಲ್ಲಿ ಪರಿಚಯ ಮಾಡಿಕೊಳ್ತಾರೆ. ಅದೇ ರೀತಿ ಚೀನಾದ ಕ್ಸಿಯಾನ್ ನಲ್ಲಿ ವಧು ತನ್ನ ಭಾವೀಪತಿಯ ಕುಟುಂಬದವರನ್ನೆಲ್ಲ ಭೇಟಿಯಾಗಿದ್ಲು. ಆದ್ರೆ ಅವರ್ಯಾರೂ ವರನ ನಿಜವಾದ ಸಂಬಂಧಿಗಳಾಗಿರಲಿಲ್ಲ.

ವರ ತನ್ನ ಕಡೆಯವರು ಅಂತಾ ಹೇಳಿಕೊಂಡು ಕರೆತಂದಿದ್ದವರೆಲ್ಲ ನಕಲಿ. ಎಲ್ಲರನ್ನೂ ಆತ ಬಾಡಿಗೆಗೆ ಕರೆತಂದಿದ್ದ. ಈ ವಿಚಾರ ತಿಳಿದ ವಧುವಿಗೆ ಶಾಕ್. ಕೊನೆಗೆ ಆ ಮದುವೆಯನ್ನೇ ವಧುವಿನ ಕಡೆಯವರು ರದ್ದು ಮಾಡಿದ್ದಾರೆ. ಅತಿಥಿಗಳು ಅಂತಾ ಹೇಳ್ಕೊಂಡು 200ಕ್ಕೂ ಹೆಚ್ಚು ಜನರನ್ನು ವರ ಕರೆತಂದಿದ್ದ.

ಅವರೆಲ್ಲರೂ ಕ್ಯಾಬ್ ಚಾಲಕರಾಗಿದ್ದರು. ಇನ್ನೊಂದಷ್ಟು ಕಾಲೇಜು ವಿದ್ಯಾರ್ಥಿಗಳಿದ್ರು. ಅವರಿಗೆಲ್ಲ 9-11 ಪೌಂಡ್ ಹಣಕೊಟ್ಟು ಕರೆದುಕೊಂಡು ಬಂದಿದ್ದ. ಕಳೆದ ಮೂರು ವರ್ಷಗಳಿಂದ ವಧು-ವರ ಇಬ್ಬರೂ ಡೇಟಿಂಗ್ ಮಾಡ್ತಾ ಇದ್ರು. ಹಾಗಾಗಿ ಅತಿಥಿಗಳೆಲ್ಲ ನಕಲಿ ಅನ್ನೋ ಅನುಮಾನ ಕೂಡ ಆಕೆಗೆ ಬಂದಿರಲಿಲ್ಲ. ಸದ್ಯ ಈ ಮದುವೆ ಪ್ರಹಸನ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...