alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಾಲಯದಲ್ಲಿ ಕ್ಯಾಮರಾ ಅಳವಡಿಸಿದ ಸರ್ಕಾರ..!

white-9

ಚಿತ್ರವಿಚಿತ್ರ ಘಟನೆಗಳು ಚೀನಾದಲ್ಲಿ ಕೇಳಿ ಬರ್ತಾ ಇರುತ್ವೆ. ಆದ್ರೆ ಈಗ ಬಂದ ಸುದ್ದಿ ಆಶ್ಚರ್ಯ ಹುಟ್ಟಿಸುವಂತಿದೆ. ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಕ್ಯಾಮರಾ ಅಳವಡಿಸಲಾಗಿದೆ.

ಯಸ್, ನಾವು ಹೇಳ್ತಿರೋದು ಸತ್ಯ. ಟಾಯ್ಲೆಟ್ ಪೇಪರ್ ಕಳ್ಳತನ ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.ಮುಖ ಗುರುತಿಸುವ ತಂತ್ರಾಂಶವುಳ್ಳ ಕ್ಯಾಮರಾ ಇದಾಗಿದೆ. ಬೀಜಿಂಗ್ ನ ಎರಡು ಶೌಚಾಲಯಗಳಲ್ಲಿ ಈ ಕ್ಯಾಮರಾ ಅಳವಡಿಸಲಾಗಿದೆ.

ಗೋಡೆಗೆ ಅಳವಡಿಸಲಾಗಿರುವ ಈ ಕ್ಯಾಮರಾವನ್ನು ಶೌಚಾಲಯಕ್ಕೆ ಬಂದ ವ್ಯಕ್ತಿ ಎದುರಿಸಬೇಕಾಗಿದೆ. ಟಾಯ್ಲೆಟ್ ಪೇಪರ್ ತೆಗೆದುಕೊಂಡ ವ್ಯಕ್ತಿಯ ಮುಖವನ್ನು ತಂತ್ರಜ್ಞಾನ ನೆನಪಿಟ್ಟುಕೊಂಡಿರುತ್ತದೆ. ಅದೇ ವ್ಯಕ್ತಿ ನಿರ್ಧಿಷ್ಟ ಅವಧಿಯಲ್ಲಿ ಮತ್ತೆ ಕಾಣಿಸಿಕೊಂಡರೆ ಪೇಪರ್ ನೀಡಲು ತಂತ್ರಜ್ಞಾನ ನಿರಾಕರಿಸುತ್ತದೆ.

ಕಳೆದ ಕೆಲವು ವರ್ಷಗಳಿಂದ ಶೌಚಾಲಯದಲ್ಲಿ ಟಾಯ್ಲೆಟ್ ಪೇಪರ್ ಕಳ್ಳತನ ಜೋರಾಗಿದೆ. ಸಾರ್ವಜನಿಕ ಶೌಚಾಲಯದ ಟಾಯ್ಲೆಟ್ ಪೇಪರನ್ನು ಸಾರ್ವಜನಿಕರು ಮನೆಗಳಲ್ಲಿ ಉಪಯೋಗಿಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...