alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಗೆ ಹೋಗದ ಮಗಳನ್ನು ಬೈಕಿಗೆ ಕಟ್ಟಿದ ಭೂಪ

ಚಿಕ್ಕ ಮಕ್ಕಳು ಶಾಲೆಗೆ ಹೋಗಲು ತಕರಾರು ತೆಗೆಯುವುದು ಸಹಜ. ಇಂತಹ ಸಂದರ್ಭಗಳಲ್ಲಿ ಪೋಷಕರು ಪುಸಲಾಯಿಸಿಯೋ ಅಥವಾ ಬೆದರಿಸಿಯೋ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಚೀನಾದಲ್ಲೊಬ್ಬ ಭೂಪ ಮಾಡಿದ್ದೇ ಬೇರೆ.

ಶಾಲೆಗೆ ಹೋಗಲು ಒಪ್ಪದ ಪುಟ್ಟ ಮಗಳನ್ನು ತನ್ನ ಬೈಕ್ ಗೆ ಕಟ್ಟಿಕೊಂಡು ಬಲವಂತವಾಗಿ ಕರೆದೊಯ್ದಿದ್ದಾನೆ ಈ ಅಪ್ಪ. ಬೈಕ್ ಹಿಂಬದಿಗೆ ಹಗ್ಗದಿಂದ ಮಗಳನ್ನು ಕಟ್ಟಿದ್ದ ಈತ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ದಾರಿಹೋಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಈ ವಿಡಿಯೋ ದೃಶ್ಯಾವಳಿ ಪೊಲೀಸರಿಗೂ ತಲುಪಿದ್ದು, ವಿದ್ಯಾರ್ಥಿನಿಯ ಅಪ್ಪನನ್ನು ಠಾಣೆಗೆ ಕರೆಸಿಕೊಂಡು ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಅಪ್ಪ ಮಾಡಿದ ಕೃತ್ಯಕ್ಕೆ ಜನ ಛೀಮಾರಿ ಹಾಕುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...