alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಬಾತ್ ರೂಂ ಮೇಲಿತ್ತು ಶವ : 2 ವರ್ಷಗಳ ನಂತ್ರ ಹೊರಬಿತ್ತು ಸತ್ಯ

ಪೂರ್ವ ಚೀನಾದ ಝೆಜಿಯಾಂಗ್ ನಲ್ಲಿ ದಂಗಾಗಿಸುವ ಘಟನೆ ಬೆಳಕಿಗೆ ಬಂದಿದೆ. ಮೂರನೇ ಮಹಡಿಯಲ್ಲಿರುವ ಬಾತ್ ರೂಮ್ ಮೇಲೆ ಶವವೊಂದು ಸಿಕ್ಕಿದೆ. ಚೀನಾ ವರ್ಷಾಚರಣೆ ಹಿನ್ನೆಲೆಯಲ್ಲಿ ಮನೆ ಸ್ವಚ್ಛತೆಗೆ ಮನೆಯವರು ಮುಂದಾಗಿದ್ದಾರೆ. ಬಾತ್ ರೂಂ ಮೇಲೆ ಸ್ವಚ್ಛಗೊಳಿಸುತ್ತಿದ್ದಾಗ ಶವ ಸಿಕ್ಕಿದೆ.

ಸುಮಾರು 2 ವರ್ಷಗಳ ಹಿಂದೆಯೇ ಕುಟುಂಬವೊಂದು ಈ ಮನೆಗೆ ಬಂದು ನೆಲೆಸಿದೆ. ಮೂರನೇ ಮಹಡಿಯಲ್ಲಿದ್ದ ಬಾತ್ ರೂಂ ಮೇಲೆ ಮರದ ಹಲಗೆಯನ್ನು ಹಾಕಲಾಗಿದೆ. ಸ್ವಚ್ಛಗೊಳಿಸುವ ವೇಳೆ ಮನೆಯ ವ್ಯಕ್ತಿಗೆ ಸಿಗರೇಟ್ ಚೂರು ಕಂಡಿದೆ. ಅದನ್ನು ತೆಗೆಯಲು ಮುಂದಾದಾಗ ಮರದ ಹಲಗೆ ಕೆಳಗೆ ಕೊಳೆಯುತ್ತಿರುವ ಶವ ಕಂಡಿದೆ.

ಕಂಗಾಲಾದ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಶವ ಪಕ್ಕದ ಮನೆಯ 30 ವರ್ಷದ ವ್ಯಕ್ತಿಯದೆಂದು ಗೊತ್ತಾಗಿದೆ. ಆತ ಡ್ರಗ್ಸ್ ದಾಸನಾಗಿದ್ದನಂತೆ. ಆದ್ರೆ ಆತನ ಸಾವು ಯಾವಾಗ ಮತ್ತು ಹೇಗೆ ಆಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸುಮಾರು 2 ವರ್ಷಗಳ ಹಿಂದೆ ಆತ ಸಾವನ್ನಪ್ಪಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.

ಮೂರನೇ ಮಹಡಿಯಲ್ಲಿದ್ದ ಬಾತ್ ರೂಮನ್ನು ಮನೆಯವರು ಅಪರೂಪಕ್ಕೆ ಬಳಸುತ್ತಿದ್ದರು. ಅವರಿಗೆ ಬಾತ್ ರೂಮ್ ನಿಂದ ಯಾವುದೇ ವಾಸನೆ ಕೂಡ ಬಂದಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...