alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾದ ಫ್ಯಾಕ್ಟರಿಯಲ್ಲಿ ರೋಬೋಟ್ ಗಳದ್ದೇ ಕಾರುಬಾರು

tosy_arm_robot

ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಈಗ ರೋಬೋಟ್ ಗಳಿಂದ ನಿಮ್ಮ ಉದ್ಯೋಗವನ್ನು ಕಾಪಾಡಿಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ. ಚೀನಾದ ಡಾಂಗ್ಗುವಾನ್ ನಲ್ಲಿರೋ ಕಾರ್ಖಾನೆಯೊಂದರಲ್ಲಿ ಈಗ ರೋಬೋಟ್ ಗಳದ್ದೇ ದರ್ಬಾರು. ಶೇ.90 ರಷ್ಟು ನೌಕರರನ್ನು ತೆಗೆದುಹಾಕಿರುವ ಫ್ಯಾಕ್ಟರಿ, ಅವರ ಬದಲು ರೋಬೋಟ್ ಗಳನ್ನು ನೇಮಿಸಿಕೊಂಡಿದೆ.

Changying Precision Technoligy Company ಮೊಬೈಲ್ ಗಳನ್ನು ಉತ್ಪಾದಿಸುತ್ತದೆ. ಅಲ್ಲಿ ಸುಮಾರು 650 ಮಂದಿ ಕೆಲಸ ಮಾಡ್ತಾ ಇದ್ರು. ಆದ್ರೆ ಇತ್ತೀಚೆಗಷ್ಟೆ ಕಂಪನಿ ಶೇ.90 ರಷ್ಟು ಉದ್ಯೋಗಿಗಳನ್ನು ತೆಗೆದುಹಾಕಿದ್ದು, ಅವರ ಬದಲು ರೋಬೋಟ್ ಗಳಿಂದ ಕೆಲಸ ಮಾಡಿಸ್ತಾ ಇದೆ. ಸದ್ಯ ಆ ಕಂಪನಿಯಲ್ಲಿ ಕೆಲಸ ಮಾಡ್ತಾ ಇರೋ ಮನುಷ್ಯರು ಕೇವಲ 60 ಮಂದಿ ಮಾತ್ರ.

ರೋಬೋಟ್ ಗಳ ನೇಮಕದಿಂದ ಕಂಪನಿಯ ಕೆಲಸಕ್ಕೆ ಹೊಡೆತ ಬಿದ್ದಿಲ್ಲ, ಬದಲಾಗಿ ಉತ್ಪಾದನಾ ಪ್ರಮಾಣ ಶೇ.250 ರಷ್ಟು ಹೆಚ್ಚಳ ಕಂಡಿದೆಯಂತೆ, ಗುಣಮಟ್ಟವೂ ಸುಧಾರಿಸಿದೆ. ಹೀಗೆ ಆಟೋಮೇಶನ್ ಇನ್ನಷ್ಟು ಸುಧಾರಿಸುತ್ತಲೇ ಉದ್ಯೋಗಿಗಳ ಸಂಖ್ಯೆಯನ್ನು 20 ಕ್ಕೆ ಇಳಿಸುವುದಾಗಿ ಕಂಪನಿ ಹೇಳಿಕೊಂಡಿದೆ. ‘ರೋಬೋಟ್ ರಿಪ್ಲೇಸ್ ಹ್ಯೂಮನ್’ ಎಂಬ ಕಾರ್ಯಕ್ರಮವನ್ನೇ ಹಮ್ಮಿಕೊಂಡಿರುವ ಕಾರ್ಖಾನೆ, ಒಟ್ಟು 1000 ರೋಬೋಟ್ ಗಳನ್ನು ನೇಮಕ ಮಾಡುವ ಗುರಿ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...