alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನ ಕಿಟಕಿಯಲ್ಲಿ ತಲೆ ಸಿಗಿಸಿಕೊಂಡು ಪರದಾಡಿದ ಸೇಲ್ಸ್ ಮನ್

ಕಾರ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಸೇಲ್ಸ್ ಮನ್ ಒಬ್ಬ ಕಾರು ಖರೀದಿಸಲು ಬಂದ ಗ್ರಾಹಕರಿಗೆ ಪ್ರಾತ್ಯಕ್ಷಿಕೆ ನೀಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾನೆ. ಕಾರಿನ ವಿಶಿಷ್ಟತೆಗಳನ್ನು ಪರಿಚಯಿಸಲು ಮುಂದಾಗಿದ್ದ ಈತ ಮುಜುಗರಕ್ಕೊಳಗಾಗಿದ್ದಾನೆ.

ಚೀನಾದಲ್ಲಿ ಈ ಘಟನೆ ನಡೆದಿದ್ದು, ಸೇಲ್ಸ್ ಮನ್ ಕಾರಿನ ವಿಶೇಷತೆಗಳನ್ನು ಗ್ರಾಹಕರಿಗೆ ತಿಳಿಸಿದ ಬಳಿಕ ಆಟೋಮ್ಯಾಟಿಕ್ ಡೋರ್ ಕುರಿತು ವಿವರಣೆ ನೀಡಲು ಮುಂದಾಗಿದ್ದಾನೆ. ಇದರ ಪರೀಕ್ಷೆಗಾಗಿ ತನ್ನ ತಲೆಯನ್ನೇ ಪಣಕ್ಕೊಡ್ಡಿದ್ದಾನೆ.

ಆತ ಕಾರಿನೊಳಗೆ ಇಣುಕಿದ್ದು, ದುರದೃಷ್ಟವಶಾತ್ ಸೆನ್ಸಾರ್ ವಿಫಲವಾದ ಕಾರಣ ಡೋರ್ ನಡುವೆ ಸೇಲ್ಸ್ ಮನ್ ತಲೆ ಸಿಕ್ಕಿ ಹಾಕಿಕೊಂಡಿದೆ. ಕಡೆಗೆ ಶೋ ರೂಮ್ ನ ಇತರೆ ಸಿಬ್ಬಂದಿ ಧಾವಿಸಿ ಬಂದು ಆತನನ್ನು ರಕ್ಷಿಸಿದ್ದಾರೆ. ಸೇಲ್ಸ್ ಮನ್ ಕತ್ತಿಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಯಡವಟ್ಟಿನ ವಿಡಿಯೋ ವೈಲರ್ ಆಗಿದ್ದು, ತರಹೇವಾರಿ ಕಮೆಂಟ್ ಗಳು ಬಂದಿವೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...