alex Certify
ಕನ್ನಡ ದುನಿಯಾ       Mobile App
       

Kannada Duniya

ಆಟವಾಡ್ತಾ 5 ಲಕ್ಷ ರೂ. ನೋಟು ಹರಿದ ಬಾಲಕ

china-kid-notes

ಐದು ವರ್ಷದ ಮಗನನ್ನು ಮನೆಯಲ್ಲಿ ಬಿಟ್ಟು ಹೋಗಿದ್ದು ಪಾಲಕರಿಗೆ ದುಬಾರಿಯಾಗಿ ಪರಿಣಮಿಸಿದೆ. ಆಟವಾಡ್ತಾ ಆಟವಾಡ್ತಾ ಮಗ ಐದು ಲಕ್ಷ ರೂಪಾಯಿ ನೋಟುಗಳನ್ನು ಹರಿದು ಹಾಕಿದ್ದಾನೆ. ಈ ಹಣವನ್ನು ಮಗನ ತಂದೆ ಬ್ಯಾಂಕ್ ನಿಂದ ಸಾಲದ ರೂಪದಲ್ಲಿ ತಂದಿದ್ದ.

ಈ ಘಟನೆ ನಡೆದಿರೋದು ಚೀನಾದಲ್ಲಿ. ಗಾವೋ ಎಂಬ ವ್ಯಕ್ತಿ ತನ್ನ ಐದು ವರ್ಷದ ಮಗನನ್ನು ಮನೆಯಲ್ಲಿ ಬಿಟ್ಟು ಪತ್ನಿ ಜೊತೆ ಹೊರಗೆ ಹೋಗಿದ್ದ. ಮನೆಯಲ್ಲಿದ್ದ ಮಗ ಬೀರುವಿನ ಬಾಗಿಲು ತೆಗೆದು ಮೊದಲು ನೋಟುಗಳ ಜೊತೆ ಆಟವಾಡಿದ್ದಾನೆ. ನಂತ್ರ 50 ಸಾವಿರ ಯುವಾನ್ ಅಂದ್ರೆ ಸುಮಾರು 5 ಲಕ್ಷ ರೂಪಾಯಿ ನೋಟುಗಳನ್ನು ಹರಿದು ಹಾಕಿದ್ದಾನೆ.

ಮನೆಗೆ ಬಂದ ಪಾಲಕರು ಮಗನ ಕೆಲಸ ನೋಡಿ ದಂಗಾಗಿದ್ದಾರೆ. ಹರಿದ ನೋಟುಗಳನ್ನು ತೆಗೆದುಕೊಂಡು ಬ್ಯಾಂಕ್ ಗೆ ಹೋದ ಗಾವೋ ಹೊಸ ನೋಟು ಕೊಡುವಂತೆ ಕೇಳಿದ್ದಾನೆ. ಆದ್ರೆ ಹರಿದ ನೋಟುಗಳನ್ನು ಜೋಡಿಸಿಕೊಂಡು ಬಂದಲ್ಲಿ ಮಾತ್ರ ಹಣ ಬದಲಾಯಿಸಿಕೊಡುವುದಾಗಿ ಬ್ಯಾಂಕ್ ನವರು ಹೇಳಿದ್ದಾರೆ. ಎರಡು ದಿನ ಹರಿದ ನೋಟುಗಳ ಜೋಡಣೆಗೆ ಗಾವೋ ಪ್ರಯತ್ನಪಟ್ಟಿದ್ದಾರೆ. ಆದ್ರೆ ಹರಿದ ನೋಟುಗಳ ಜೋಡಣೆ ಸಾಧ್ಯವಾಗಿಲ್ಲ ಎಂದು ಗಾವೋ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...