alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ನಿಲ್ದಾಣದಲ್ಲಿ X-ray ಮಷಿನ್ ಮೇಲೆ ಹತ್ತಿ ಕುಳಿತ ಮಹಿಳೆ, ಕಾರಣ?

ಸೆಕ್ಯೂರಿಟಿ ಚೆಕ್ ಗಾಗಿ ಕ್ಯೂನಲ್ಲಿ ನಿಲ್ಲೋದು ಕಿರಿಕಿರಿ ಉಂಟು ಮಾಡುತ್ತದೆ. ಅಷ್ಟೇ ಅಲ್ಲ ಚೆಕಿಂಗ್ ವೇಳೆ ನಮ್ಮ ಬ್ಯಾಗ್ ಎಲ್ಲಿ ಅದಲು ಬದಲಾಗುತ್ತೋ ಅನ್ನೋ ಆತಂಕ ಬೇರೆ. ಇದೇ ಭಯದಲ್ಲಿ ಚೀನಾದ ಮಹಿಳೆಯೊಬ್ಬಳು ವಿಚಿತ್ರ ಕೆಲಸ ಮಾಡಿದ್ದಾಳೆ.

ಚೆಕಿಂಗ್ ವೇಳೆ ತನ್ನ ಬ್ಯಾಗ್ ಗಮನಿಸಬೇಕು ಅನ್ನೋ ಕಾರಣಕ್ಕೆ ಎಕ್ಸರೇ ಮಷಿನ್ ಮೇಲೆ ಹತ್ತಿ ಕುಳಿತುಬಿಟ್ಟಿದ್ದಾಳೆ. ಚೀನಾದ ಡೊಂಗೌನ್ ನಲ್ಲಿರೋ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಚೆಕಿಂಗ್ ವೇಳೆ ತನ್ನ ಬ್ಯಾಗನ್ನು ಯಾರಾದ್ರೂ ಕದ್ದುಬಿಡಬಹುದು ಅನ್ನೋ ಭಯ ಮಹಿಳೆಗಿತ್ತು.

ಭದ್ರತಾ ಸಿಬ್ಬಂದಿ ಬ್ಯಾಗ್ ನಲ್ಲೇನಿದೆ ಅಂತಾ ಎಕ್ಸರೇ ಮಷಿನ್ ನ ಸ್ಕ್ರೀನ್ ನಲ್ಲಿ ಮಾನಿಟರ್ ಮಾಡ್ತಾ ಇದ್ರೆ, ಮಹಿಳೆ ದಿಢೀರನೆ ಮಷಿನ್ ಏರಿ ಕುಳಿತುಬಿಟ್ಟಿದ್ದಾಳೆ. ಚೆಕಿಂಗ್ ಮುಗಿದ ಬಳಿಕ ಮಷಿನ್ ಮೇಲಿಂದ ಕೆಳಕ್ಕಿಳಿದು, ತನ್ನ ಬ್ಯಾಗ್ ಮತ್ತು ಸೂಟ್ ಕೇಸ್ ಅನ್ನೊಮ್ಮೆ ಚೆಕ್ ಮಾಡಿಕೊಂಡು ತೆರಳಿದ್ದಾಳೆ.

A woman climbed into security inspection machine with her handbag, to prevent theft.

LMAO! A woman climbed into security inspection machine with her handbag, to prevent THEFT.Feb 11th, railway station inspectors in Dongguan found a woman climb into the security inspection machine. She explained this is to protect her handbag from theft.

Posted by PearVideo on Tuesday, February 13, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...