alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತೆ ಮೇಲೆ ಕೆರಳಿ ಮಗನ ಕಾಲು ಕತ್ತರಿಸಿದ ಮಹಿಳೆ

leg

ಚೀನಾದಲ್ಲಿ ಅತ್ತೆ-ಸೊಸೆಯ ಜಗಳದಲ್ಲಿ ಕೂಸು ಬಡವಾಗಿದೆ. ಅತ್ತೆಯ ಮೇಲಿನ ಕೋಪಕ್ಕೆ 30 ವರ್ಷದ ಮಹಿಳೆಯೊಬ್ಬಳು ತನ್ನ ಎರಡೂವರೆ ವರ್ಷದ ಮಗನ ಬಲಗಾಲನ್ನೇ ಕತ್ತರಿಸಿದ್ದಾಳೆ. ಚೀನಾದ ನಿಂಗ್ಸಿಯಾದಲ್ಲಿ ಈ ಘಟನೆ ನಡೆದಿದೆ. ಅತಿಯಾದ ರಕ್ತಸ್ರಾವದಿಂದ ಬಳಲಿದ್ದ ಮಗುವಿಗೆ 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಕಾಲನ್ನು ಮರುಜೋಡಣೆ ಮಾಡಲಾಗಿದೆ.

ಯಾವುದೋ ಸಣ್ಣ ವಿಷಯಕ್ಕೆ ಅತ್ತೆ-ಸೊಸೆ ಮಧ್ಯೆ ಜೋರು ಜಗಳವಾಗಿತ್ತು, ಸಿಟ್ಟಿನ ಭರದಲ್ಲಿ ಸೊಸೆ ತನ್ನ ಮಗನ ಕಾಲು ಕತ್ತರಿಸಿಬಿಟ್ಲು. ಪುಟ್ಟ ಮಗು ನೋವಿನಿಂದ ಕೂಗಿಕೊಳ್ತಾ ಇತ್ತು. ಕೂಡಲೇ ಅಕ್ಕಪಕ್ಕದವರು ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ರು.

ಆದ್ರೆ ಅವರು ಬಾಗಿಲು ತೆರೆಯದೇ ಇದ್ದಿದ್ರಿಂದ ಕಿಟಕಿ ಒಡೆದು ಒಳನುಗ್ಗಿದ ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ರು. ಅತ್ತೆ- ಸೊಸೆಯನ್ನು ವಶಕ್ಕೆ ಪಡೆದ್ರು. ಈ ಕೃತ್ಯ ನಡೆಸಿದ ಮಹಿಳೆ ಮಾನಸಿಕ ಅಸ್ವಸ್ಥೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...