alex Certify
ಕನ್ನಡ ದುನಿಯಾ       Mobile App
       

Kannada Duniya

ಕಲಿಕೆ ಹೆಸರಲ್ಲಿ ಮಕ್ಕಳಿಗೆ ಚಿತ್ರಹಿಂಸೆ

ಮಾರ್ಷಲ್ ಆರ್ಟ್ಸ್ ಕಲಿಯಲು ಹೆಚ್ಚಿನ ಪ್ರಯತ್ನಬೇಕು. ಶಿಕ್ಷಕರು ಹೇಳಿದಂತೆ ಕೇಳಬೇಕು. ಸುಲಭವಾಗಿ ದಕ್ಕುವಂತಹ ಕಲೆ ಇದಲ್ಲ. ಚೀನಾ ಮಾರ್ಷಲ್ ಆರ್ಟ್ಸ್ ಜೊತೆ ಎಲ್ಲ ಆಟಗಳಲ್ಲೂ ಮುಂದಿದೆ. ಚೀನಾ ಫೈಟರ್ಸ್ ಇಷ್ಟು ಪ್ರಶಸ್ತಿ ಬಾಚಿಕೊಳ್ಳಲು ಅವ್ರಿಗೆ ಸಿಗುತ್ತಿರುವ ತರಬೇತಿಯೇ ಮುಖ್ಯ ಕಾರಣ.

ಚೀನಾದ ಕೆಲ ಭಾಗಗಳಲ್ಲಿ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಸಣ್ಣ ಸಣ್ಣ ಮಕ್ಕಳನ್ನು ಹೋರಾಟಕ್ಕೆ ಅಣಿ ಮಾಡಲಾಗುತ್ತದೆ. ಚಾಂಪಿಯನ್ ಅಥ್ಲೆಟ್ ತಯಾರಿಸುವುದು ಚೀನಾದ ಗುರಿ. ಇದೇ ಕಾರಣಕ್ಕೆ ಬಾಲ್ಯದಲ್ಲಿಯೇ ತರಬೇತಿ ಶುರುವಾಗುತ್ತದೆ. ಈ ತರಬೇತಿ ಸುಲಭವಾಗಿರುವುದಿಲ್ಲ. ಮಕ್ಕಳಿಗೆ ತರಬೇತಿ ಹೆಸರಿನಲ್ಲಿ ಟಾರ್ಚರ್ ನೀಡಲಾಗುತ್ತದೆ. ನೋವಿನ ಮಧ್ಯೆ ಮಕ್ಕಳು ತರಬೇತಿ ಪಡೆಯುತ್ತಾರೆ. ಕೂಗ್ತಾ,ಅಳ್ತಾ ಮಕ್ಕಳು ತರಬೇತಿ ಪಡೆಯುತ್ತಾರೆ.

ತರಬೇತಿ ವೇಳೆ ಅನೇಕ ಮಕ್ಕಳು ಗಾಯಗೊಳ್ತಾರೆ. ಹಾಗಂತ ತರಬೇತಿಯನ್ನು ಅರ್ಧಕ್ಕೆ ಬಿಟ್ಟು ಹೋಗುವಂತಿಲ್ಲ. ಮಕ್ಕಳ ಹೆಸರು ದಾಖಲೆ ಸೇರಲಿ, ದೇಶಕ್ಕೆ ಪ್ರಶಸ್ತಿ ಬರಲಿ ಎನ್ನುವ ಕಾರಣಕ್ಕೆ ಪಾಲಕರು ಕೂಡ ಮಕ್ಕಳನ್ನು ತರಬೇತಿಗೆ ಕಳುಹಿಸುತ್ತಾರೆ. ಮೂರು ವರ್ಷದ ಮಕ್ಕಳನ್ನೇ ಎಡ್ಮಿಷನ್ ಟ್ರೈನಿಂಗ್ ಗೆ ಕಳುಹಿಸಲಾಗುತ್ತದೆ. ಬಲವುಳ್ಳ ಮಕ್ಕಳನ್ನು ತರಬೇತಿಗೆ ಆಯ್ಕೆ ಮಾಡುವ ತರಬೇತುದಾರರು ನೋವಾಗುವ ಬಗೆ ಬಗೆಯ ವ್ಯಾಯಾಮಗಳನ್ನು ಮಾಡಿಸ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...