alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾದಲ್ಲಿ ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸೋ ಪಾದಚಾರಿಗಳಿಗೆ ಈ ಶಿಕ್ಷೆ

ಭಾರತದಲ್ಲಿ ಸಂಚಾರ ನಿಯಮ ಉಲ್ಲಂಘನೆ ತಡೆಯೋದು, ಅಪಘಾತಗಳ ಸಂಖ್ಯೆ ಕಡಿಮೆ ಮಾಡೋದು ನಿಜಕ್ಕೂ ಸವಾಲಿನ ಕೆಲಸ. ತಾನೇ ದೇವರು ಎಂಬಂತೆ ರಸ್ತೆಯಲ್ಲಿ ಓಡಾಡ್ತಾರೆ ಜನ. ಚೀನಾದಲ್ಲಿ ಈ ರೀತಿ ಸಂಚಾರ ನಿಯಮ ಉಲ್ಲಂಘನೆಯನ್ನು ತಡೆಯಲು ಹೊಸ ಪ್ಲಾನ್ ಮಾಡಲಾಗಿದೆ.

ಕೆಂಪು ದೀಪ ಬೆಳಗಿದಾಗ ಯಾರೂ ರಸ್ತೆ ದಾಟುವಂತಿಲ್ಲ. ಆಗ ಯಾರಾದ್ರೂ ಪಾದಚಾರಿಗಳು ರಸ್ತೆ ದಾಟಲು ಮುಂದಾದ್ರೆ ಅವರ ಮೈಗೆ ನೀರು ಸಿಂಪಡಿಸಲಾಗುತ್ತದೆ. ಇದು ಸಂಪೂರ್ಣ ಆಟೋಮ್ಯಾಟಿಕ್. ಪಾದಚಾರಿಗಳಿಗೂ ಇಲ್ಲಿ ಟ್ರಾಫಿಕ್ ಸಿಗ್ನಲ್ ಗಳಿವೆ.

ಅದನ್ನು ಉಲ್ಲಂಘಿಸಿ ಮುಂದಡಿ ಇಟ್ರೆ ಪೈಪ್ ಗಳಿಂದ ನೀರು ತಂತಾನೇ ಪಾದಚಾರಿಗಳ ಮೈಗೆ ಸಿಡಿಯುತ್ತದೆ. ಚೀನಾದ ಹುಬೆ ಪ್ರದೇಶದಲ್ಲಿ ಇಂತಹ ಪೈಪ್ ಗಳನ್ನು ಟ್ರಾಫಿಕ್ ಸಿಗ್ನಲ್ ನಲ್ಲಿ ಅಳವಡಿಸಲಾಗಿದೆ. 1.6 ಅಡಿ ಎತ್ತರಕ್ಕೆ ಇದರಿಂದ ನೀರು ಚಿಮ್ಮುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...