alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಳ್ಳೆ ಓಡಿಸಲು ಚೀನಾ ಅನುಸರಿಸಿದೆ ಆಶ್ಚರ್ಯಕಾರಿ ವಿಧಾನ

ಸೊಳ್ಳೆಗಳನ್ನು ನಿಯಂತ್ರಿಸುವುದ್ರಲ್ಲಿ ಚೀನಾ ಬಹುತೇಕ ಯಶಸ್ವಿಯಾಗಿದೆ. ವಿಶ್ವದ ಅತ್ಯಂತ ದೊಡ್ಡ ಕಾರ್ಖಾನೆ ಸಹಾಯದಿಂದ ಸೊಳ್ಳೆಗಳ ನಿಯಂತ್ರಣ ಸಾಧ್ಯವಾಗಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವಂತೆ ಸೊಳ್ಳೆಯನ್ನು ಸೊಳ್ಳೆಯಿಂದಲೇ ನಿಯಂತ್ರಿಸುವ ಪ್ರಯತ್ನದಲ್ಲಿ ಚೀನಾ ಯಶಸ್ವಿಯಾಗಿದೆ.

ಕಾರ್ಖಾನೆಯಲ್ಲಿ ಉತ್ಪತ್ತಿಯಾಗುವ ಪುರುಷ ಸೊಳ್ಳೆ ಹೊರಗಿನ ಶತ್ರುಗಳನ್ನು ಸದೆಬಡಿಯುತ್ತದೆ. ಈ ಕಾರ್ಖಾನೆಯಲ್ಲಿ ಪ್ರತಿ ವಾರ 50 ಲಕ್ಷ ಸೊಳ್ಳೆಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಕಾರ್ಖಾನೆಯಲ್ಲಿ ಸೃಷ್ಟಿಯಾಗುವ ಸೊಳ್ಳೆಗೆ ಒಳ್ಳೆ ಸೊಳ್ಳೆ ಎಂದು ಕರೆಯಲಾಗುತ್ತದೆ.

ಚೀನಾದ ಗುವಾಂಗ್ಝೌನಲ್ಲಿ ಈ ಕಾರ್ಖಾನೆಯಿದೆ. ಫ್ಯಾಕ್ಟರಿ 3500 ಅಡಿ ವಿಸ್ತಾರದಲ್ಲಿದೆ. ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳನ್ನು ಇವು ಸಾಯಿಸುತ್ತವೆ. ಶೇಕಡಾ 96ರಷ್ಟು ಸೊಳ್ಳೆಗಳನ್ನು ನಾಶ ಮಾಡುವಲ್ಲಿ ಕಾರ್ಖಾನೆಯಲ್ಲಿ ಉತ್ಪಾದನೆಯಾದ ಸೊಳ್ಳೆಗಳು ಯಶಸ್ವಿಯಾಗಿವೆ.

ಕಾರ್ಖಾನೆಯಲ್ಲಿ ಹುಟ್ಟುವ ಸೊಳ್ಳೆಗಳ ಜೀನ್ಸ್ ನಲ್ಲಿ ಬದಲಾವಣೆ ಮಾಡಲಾಗಿರುತ್ತದೆ. ಅವು ಹೆಣ್ಣು ಸೊಳ್ಳೆಗಳ ಜೊತೆ ಸಂಪರ್ಕ ಬೆಳೆಸಿದಾಗ ಹೆಣ್ಣು ಸೊಳ್ಳೆಗಳು ಸಾವನ್ನಪ್ಪುತ್ತವೆ. ಸೊಳ್ಳೆಗಳನ್ನು ಕೊಲೆ ಮಾಡಲು ಶಕ್ತಿಶಾಲಿ ರೆಡಾರ್ ಅನ್ನು ಸೃಷ್ಟಿ ಮಾಡಲಾಗಿದೆ. ಕಿಲೋಮೀಟರ್ ದೂರದ ಸೊಳ್ಳೆಯನ್ನು ಹುಡುಕಿ ಕೊಲ್ಲುವ ಸಾಮರ್ಥ್ಯ ಇದಕ್ಕಿದೆ. ಭಾರತದಲ್ಲಿಯೂ ಇದ್ರ ಪ್ರಯೋಗ ನಡೆಯುತ್ತಿದೆ. ಮುಂಬೈನ ಜಿಬಿಐಟಿ ಕಂಪನಿಗೆ ಕೃತಕ ಸೊಳ್ಳೆ ಸೃಷ್ಟಿಗೆ ಒಪ್ಪಿಗೆ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...