alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾದ ರಸ್ತೆಯಲ್ಲಿ ಒಂಟಿ ಚಕ್ರದ ಸವಾರಿ

ಚೀನಾದ ಕ್ವೆಝೋ ಹೈವೇಯಲ್ಲಿ ರನ್ ವೇ ಟೈರ್ ಒಂದು ಗಲಿಬಿಲಿ ಸೃಷ್ಟಿಸಿತ್ತು. ವೇಗವಾಗಿ ಚಲಿಸ್ತಾ ಇದ್ದ ಲಾರಿಯೊಂದರಿಂದ ಈ ಟೈರ್ ಕಳಚಿ ಬಿದ್ದಿದೆ. ಚಕ್ರ ಕಳಚಿರೋದು ಚಾಲಕನ ಅರಿವಿಗೇ ಬಂದಿಲ್ಲ. ಆತ ಹಾಗೆಯೇ ಮುಂದಕ್ಕೆ ಹೋಗಿದ್ದಾನೆ.

ಇಳಿಜಾರಿನ ರಸ್ತೆಯಾಗಿದ್ರಿಂದ ಟೈರ್ ವೇಗವಾಗಿ ಉರುಳಿಕೊಂಡು ಬಂದಿದೆ. ಅದೃಷ್ಟವಶಾತ್ ಮನುಷ್ಯರಿಗೆ ಹಾನಿ ಮಾಡಿಲ್ಲ. ಪಾರ್ಕ್ ಮಾಡಿದ್ದ ಎರಡು ಕಾರುಗಳಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಚಕ್ರ ಡಿಕ್ಕಿ ಹೊಡೆದಿದ್ರಿಂದ ಕಾರುಗಳು ಕೂಡ ಕೊಂಚ ಜಖಂ ಆಗಿವೆ.

ಕಾರಿನ ಹೆಡ್ ಲೈಟ್ ಹಾಗೂ ಬೂಟ್ ನುಜ್ಜುಗುಜ್ಜಾಗಿವೆ. ಒಂದು ಕಾರಿನ ಕಿಟಕಿ ಗಾಜು ಒಡೆದಿದೆ. ಲಾರಿ ಓವರ್ ಲೋಡ್ ಆಗಿದ್ದರಿಂದ ಚಕ್ರ ಕಳಚಿ ಬಿದ್ದಿದೆ ಅಂತಾ ಹೇಳಲಾಗ್ತಿದೆ. ಚಕ್ರ ಹೆದ್ದಾರಿಯಲ್ಲಿ ಹೋಗ್ತಾ ಇರೋ ದೃಶ್ಯ ಕ್ಯಾಮರಾದಲ್ಲೂ ಸೆರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...