alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯತಮನನ್ನೇ ಹೊತ್ತು ಸಾಗಿದ ಯುವತಿ, ಕಾರಣ ಗೊತ್ತಾ..?

china

ಕೆಲವೊಮ್ಮೆ ಪ್ರೀತಿಯನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಸಾಮಾನ್ಯವಾಗಿ ಪ್ರಿಯತಮೆಯನ್ನು ಪ್ರಿಯಕರ ಹೊತ್ತುಕೊಂಡು ಸಾಗುತ್ತಾನೆ. ಆದರೆ, ಈ ಪ್ರಕರಣದಲ್ಲಿ ಉಲ್ಟಾ ಆಗಿದೆ. ಪ್ರಿಯತಮೆಯೇ ತನ್ನ ಗೆಳೆಯನನ್ನು ಬೆನ್ನ ಮೇಲೆ ಹೊತ್ತು ಸಾಗಿದ್ದಾಳೆ.

ಚೀನಾದಲ್ಲಿ ನಡೆದ ಘಟನೆಯ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಚರ್ಚೆಗೆ ಒಳಗಾಗಿದೆ. ಹೆಣ್ಣುಮಕ್ಕಳನ್ನು ಪುರುಷರು ಹೊತ್ತುಕೊಂಡು ಸಾಗುವ ಬದಲಿಗೆ ಯುವತಿಯೇ ಯುವಕನನ್ನು ಹೊತ್ತುಕೊಂಡು ಹೋಗಿದ್ದಾಳೆ. ಇದು ಸರಿ, ತಪ್ಪು ಎಂದೆಲ್ಲಾ ಪರ, ವಿರೋಧ ಚರ್ಚೆ ನಡೆದಿವೆ. ಚೀನಾದ ವುಹಾನ್ ಪ್ರಾಂತ್ಯದಲ್ಲಿ ಪ್ರೇಮಿಗಳು ಸುತ್ತಾಡಲು ಹೋಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಭಾರೀ ಮಳೆ ಸುರಿದಿದೆ. ರಸ್ತೆಯಲ್ಲೆಲ್ಲಾ ನೀರು ನುಗ್ಗಿದೆ.

ಯುವಕ ದುಬಾರಿ ಬೆಲೆ ಶೂ ಧರಿಸಿದ್ದರಿಂದ ನೀರಿನಲ್ಲಿ ಕಾಲಿಡಲು ಹಿಂದೆ ಮುಂದೆ ಯೋಚಿಸಿದ್ದಾನೆ. ಪ್ರಿಯಕರನ ಸಮಸ್ಯೆಯನ್ನು ಅರಿತ ಗೆಳತಿ ಕೂಡಲೇ ಆತನನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ನೀರಿನಲ್ಲಿಯೇ ಹೆಜ್ಜೆ ಹಾಕಿದ್ದಾಳೆ. ನೀರು ತಾಗಿದರೆ ಗೆಳೆಯನ ದುಬಾರಿ ಬೆಲೆಯ ಶೂ ಹಾಳಾಗುತ್ತದೆ ಎಂದು ಹೀಗೆ ಮಾಡಿದ್ದಾಗಿ ಯುವತಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...