alex Certify
ಕನ್ನಡ ದುನಿಯಾ       Mobile App
       

Kannada Duniya

ಪೈಪ್ ಒಡೆದು ಸೃಷ್ಟಿಯಾಗಿದೆ ಮಂಜುಗಡ್ಡೆಯ ಜಲಪಾತ

ಜಲಪಾತಗಳ ಸೊಗಸು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ವರ್ಷಪೂರ್ತಿ ಅವುಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎಷ್ಟೋ ಕಟ್ಟಡಗಳಲ್ಲಿ ಕೃತಕ ಜಲಪಾತಗಳನ್ನು ಸೃಷ್ಟಿ ಮಾಡಿರುತ್ತಾರೆ. ಆದ್ರೆ ಚೀನಾದ ಈ ಜಲಪಾತ ಮಾತ್ರ ಎಲ್ಲಕ್ಕಿಂತ್ಲೂ ಅದ್ಭುತ.

ಎತ್ತರವಾದ ಕಟ್ಟಡವೊಂದರ ಮೇಲಿಂದ ಹೆಪ್ಪುಗಟ್ಟಿದ ನೀರು ಒಂದೇ ಸಮನೆ ಸುರಿಯುತ್ತಿದೆ. ಬೆಳ್ನೊರೆ ಎಲ್ಲಾ ಕಡೆ ಪಸರಿಸಿದಂತೆ ಕಾಣುತ್ತಿದೆ. ಪೀಪಲ್ಸ್ ಡೇಲಿಯಲ್ಲಿ ಪೋಸ್ಟ್ ಮಾಡಿರೋ ಈ ವಿಡಿಯೋ ವೈರಲ್ ಆಗಿದೆ.

ಅಷ್ಟಕ್ಕೂ ಇದು ಯಾರೋ ಸೃಷ್ಟಿ ಮಾಡಿರೋ ಜಲಪಾತವಲ್ಲ. ನೀರಿನ ಪೈಪ್ ಒಡೆದು ಸೃಷ್ಟಿಯಾಗಿರೋ ಝರಿ. ಕಳೆದ ಅಕ್ಟೋಬರ್ ನಲ್ಲೇ ಆ ಕಟ್ಟಡದ ನೀರಿನ ಪೈಪ್ ಒಡೆದಿತ್ತು. ಆದ್ರೆ ಯಾರ ಗಮನಕ್ಕೂ ಬಂದಿರಲಿಲ್ಲ. ಈಗ ನೀರು ಹೆಪ್ಪುಗಟ್ಟಿರುವುದರಿಂದ ಎಲ್ಲರ ಗಮನ ಸೆಳೆಯುತ್ತಿದೆ.

ಬಾಲ್ಕನಿಯ ಕಿಟಕಿಯಿಂದ ಸುರಿಯುತ್ತಿರುವ ಹೆಪ್ಪುಗಟ್ಟಿದ ನೀರು ನೆಲದವರೆಗೂ ಬಂದಿದೆ. ಇದು ಭಾರೀ ಕುತೂಹಲ ಹುಟ್ಟಿಸಿದ್ದು, ಸುತ್ತಮುತ್ತಲ ನಿವಾಸಿಗಳೆಲ್ಲ ಈ ವಿಶಿಷ್ಟ ಜಲಪಾತ ನೋಡಲು ಬರುತ್ತಿದ್ದಾರೆ.

Watch: Leaking pipe created a 10-meter tall iced waterfall out of an abandoned building in Anshan, Liaoning Province, NE China

Watch: Leaking pipe created a 10-meter tall iced waterfall out of an abandoned building in Anshan, Liaoning Province, NE China

Posted by People's Daily, China on Tuesday, December 26, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...