alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡಿಗೂ ಬಂತು ಬೆಲೆ ! ಬಾಡಿಗೆ ಗಂಡ ಬೇಕಾ..?

3644gty_Taobao_rent_boyfriend_china_Website_thg_130208_wmain

ಹಣಕ್ಕಾಗಿ ಕರೆದಲ್ಲಿ ಬಂದು ಮನದಣಿಸುವವರ ಕುರಿತು ಕೇಳಿದ್ದೀರಿ. ಇನ್ನು ಅದೇ ದಂಧೆ ನಡೆಸುವ ಮೂಲಕ ಪೊಲೀಸರ ರೈಡ್ ಆಗಿರುವುದನ್ನೂ ಕಂಡಿದ್ದೀರಿ. ಆದರೆ ಗಂಡು ಮಕ್ಕಳಿಗೆ ಎಲ್ಲಿಯಾದರೂ ಬೇಡಿಕೆ ಇರುವುದನ್ನು ಕೇಳಿದ್ದೀರಾ..? ಗಂಡಿಗೆಲ್ಲಿದೆ ‘ಬೆಲೆ’ ಎನ್ನುತ್ತೀರಾ ಇಲ್ಲಿ ಓದಿ.

ಜಗತ್ತಿನ ಬಹುಪಾಲು ಮಾರುಕಟ್ಟೆಯನ್ನು ತನ್ನ ಅಗ್ಗದ ಬೆಲೆಯ ಸಾಮಾನು ಸರಂಜಾಮುಗಳಿಂದ ತುಂಬಿಸಿರುವ ಚೀನಾ, ಇದೀಗ ಅಲ್ಲಿನ ಯುವತಿಯರಿಗೆ ಮನೆಗೊಪ್ಪುವ ಗೆಳೆಯನನ್ನು ‘ಬಾಡಿಗೆ’ಗೆ ನೀಡಲು ಮುಂದಾಗಿದೆ.

ಹೌದು. ಒಂಟಿ ಜೀವನದ ಕನಸು ಹೊಂದಿದ್ದರೂ ಮನೆಯವರ ಕಿರಿಕಿರಿ ಎದುರಿಸಲಾಗದ ಹೆಣ್ಮಕ್ಕಳ ಕಣ್ಣೊರೆಸಲು ‘ವೆಬ್ ಸೈಟ್’ ಒಂದು ಬಾಯ್ ಫ್ರೆಂಡ್ ಬಾಡಿಗೆಗೆ ಕೊಡುವ ವ್ಯವಹಾರ ಪ್ರಾರಂಭಿಸಿದೆ. ವಿಶೇಷವೆಂದರೆ ಬಾಡಿಗೆಗೆ ಬರುವ ಈ ಬಾಯ್ ಫ್ರೆಂಡ್ ಗಳು ಕುಟುಂಬದ ಕಾರ್ಯಕ್ರಮಗಳಲ್ಲಿ ಸಾಕ್ಷಾತ್ ಪತಿಯಂತೆಯೇ ವರ್ತನೆ ಮಾಡುವ ಮೂಲಕ ಪೋಷಕರಿಗೂ ಅನುಮಾನ ಬರದಂತೆ ನಟನೆ ಮಾಡುತ್ತಾರಂತೆ.

ಇದರಿಂದ ಅಲ್ಲಿನ ಯುವತಿಯರು ನಿನ್ನ ಮದುವೆ ಯಾವಾಗ ಎನ್ನುವ ಮನೆಯವರ ಹಾಗೂ ನೆಂಟರಿಷ್ಟರ ಮಾತಿನಿಂದ ಪಾರಾಗಬಹುದಂತೆ. ಅಂದ ಹಾಗೆ ಇವರ ಬಾಡಿಗೆ ದಿನಕ್ಕೆ 1000 ಯುವಾನ್ (9,938 ರೂಪಾಯಿ) ಅಷ್ಟೇ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...