alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗನ ಪರ್ಸ್ ಎಗರಿಸಿದ ಕೋತಿ ಮಾಡಿದ್ದೇನು…?

ಮಂಗಗಳು ಸಮೀಪದಲ್ಲಿದ್ದಾಗ ನಿಮ್ಮ ವಸ್ತುಗಳ ಬಗ್ಗೆ ಸಿಕ್ಕಾಪಟ್ಟೆ ಕೇರ್ಫುಲ್ ಆಗಿರಬೇಕು. ಯಾಕಂದ್ರೆ ತುಂಟ ಕೋತಿಗಳು ಕ್ಷಣ ಮಾತ್ರದಲ್ಲಿ ಅವನ್ನ ಎಗರಿಸಿಬಿಡುತ್ತವೆ. ಅದರಲ್ಲೂ ಚೀನಾದ ಕೋತಿಗಳಂತೂ ಸಿಕ್ಕಾಪಟ್ಟೆ ಚೇಷ್ಟೆ ಮಾಡುತ್ತವೆ.

ಪಕ್ಕಾ ನಟೋರಿಯಸ್ ಬುದ್ದಿಯ ಕೋತಿಯೊಂದು ಪ್ರವಾಸಿಗನ ಪರ್ಸ್ ಕಸಿದುಕೊಂಡಿತ್ತು. ತಂತಿ ಬೇಲಿ ಮೇಲೆ ಹತ್ತಿ ಕುಳಿತ ಮಂಗ ಪರ್ಸ್ ನಲ್ಲಿದ್ದ ನೋಟಿನ ಕಂತೆಯನ್ನೇ ಹೊರ ತೆಗೆದಿದೆ. ಎಲ್ಲಾ ನೋಟುಗಳನ್ನೂ ಕೆಳಕ್ಕೆ ಬಿಸಾಡಿದೆ.

ಪರ್ಸ್ ಖಾಲಿ ಮಾಡೋದು ಕೋತಿಗೆ ಒಂಥರಾ ಥ್ರಿಲ್ ಕೊಟ್ಟಿತ್ತು. ಅಲ್ಲಿಗೆ ಬಂದ ಇನ್ನೊಂದು ಮಂಗ ಕೂಡ ಪರ್ಸ್ ಕೈಗೆ ತೆಗೆದುಕೊಂಡಿದೆ. ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿರೋ ಪ್ರವಾಸಿಗರು ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಚೀನಾದ ಸಿಚುವಾನ್ ಪ್ರದೇಶದಲ್ಲಿರೋ ಮೌಂಟ್ ಎಮಿ ಎಂಬಲ್ಲಿ ಈ ಘಟನೆ ನಡೆದಿದೆ. ಇದು ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಇಲ್ಲಿ ಕೋತಿಗಳ ಹಾವಳಿ ಕೂಡ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...