alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ! ಅತ್ಯಾಚಾರದ ನಂತರ ಹೀನ ಕೃತ್ಯ ಎಸಗಿದ ಕಿರಾತಕ

china ev 29

ಬೀಜಿಂಗ್: ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಇತ್ತೀಚೆಗೆ ಹೆಚ್ಚಾಗಿವೆ. ಬಹುತೇಕ ಪ್ರಕರಣಗಳಲ್ಲಿ ಪರಿಚಯಸ್ಥರು, ಸಂಬಂಧಿಗಳಿಂದಲೇ ದೌರ್ಜನ್ಯ ನಡೆಯುತ್ತವೆ ಎನ್ನಲಾಗಿದೆ. ಜೊತೆಯಲ್ಲಿ ವಾಸವಾಗಿದ್ದ ಯುವತಿ ಮೇಲೆಯೇ ಅತ್ಯಾಚಾರ ಎಸಗಿದ ಘಟನೆ ಚೀನಾದಲ್ಲಿ ನಡೆದಿದೆ.

ಜೊತೆಯಾಗಿ ವಾಸಿಸುತ್ತಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿದ ಯುವಕನೊಬ್ಬ, ನಂತರದಲ್ಲಿ ಆಕೆಯನ್ನು ಮನಬಂದಂತೆ ಥಳಿಸಿದ್ದಾನೆ. ಇದರಿಂದಾಗಿ ಆಕೆ ಪ್ರಜ್ಞೆ ತಪ್ಪಿದ್ದು, ನಂತರ ಬೆತ್ತಲೆಯಾಗಿದ್ದ ಆಕೆಯನ್ನು ಸೂಟ್ ಕೇಸ್ ನಲ್ಲಿ ಹಾಕಿ ಕಸದ ತೊಟ್ಟಿಗೆ ಎಸೆದು ಬಂದಿದ್ದಾನೆ. ಅಂದ ಹಾಗೇ ಈ ಘಟನೆ ನಡೆದಿರುವುದು ಚೀನಾದಲ್ಲಿ. ಚೀನಾದ ಹುನಾನ್ ಪ್ರಾಂತ್ಯದ 23 ವರ್ಷದ ಪಾನ್ ಎಂಬ ಯುವಕ, ತನ್ನ ಜೊತೆಗಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿದ ನಂತರ ಆಕೆಯನ್ನು ಥಳಿಸಿದ್ದು, ಮೃತಪಟ್ಟಿದ್ದಾಳೆಂದು ಭಾವಿಸಿ ಕಸದ ತೊಟ್ಟಿಯಲ್ಲಿ ಹಾಕಿದ್ದಾನೆ.

ಆಕೆಗೆ ಪ್ರಜ್ಞೆ ಬಂದಾಗ ಸೂಟ್ ಕೇಸ್ ನಲ್ಲಿರುವುದು ಗೊತ್ತಾಗಿ ಜೋರಾಗಿ ಬಡಿದಿದ್ದಾಳೆ. ಇದನ್ನು ಗಮನಿಸಿದವರು ಸೂಟ್ ಕೇಸ್ ತೆರೆದು ರಕ್ಷಿಸಿದ್ದಾರೆ. ಆಗ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿ, ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವತಿ ಸೂಟ್ ಕೇಸ್ ನಲ್ಲಿ ಬಡಿದುಕೊಳ್ಳುವುದು, ಅದರಿಂದ ಹೊರಬರುತ್ತಿರುವ ಫೋಟೋಗಳು ಚೀನಾದಲ್ಲಿ ಭಾರೀ ಚರ್ಚೆಗೆ ಒಳಗಾಗಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...