alex Certify
ಕನ್ನಡ ದುನಿಯಾ       Mobile App
       

Kannada Duniya

ಉರಿಯುತ್ತಿರುವ ಕಟ್ಟಡದಿಂದ ಕೆಳಕ್ಕೆ ಹಾರಿದ, ಮುಂದೆ….

ಚೀನಾದಲ್ಲಿ ವ್ಯಕ್ತಿಯೊಬ್ಬ ಕಟ್ಟಡದ ಮೇಲಿಂದ ಹಾರಿ ಬೆಂಕಿ ದುರಂತದಿಂದ ಪಾರಾಗಿದ್ದಾನೆ. ಈ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಡಿಸೆಂಬರ್ 13ರಂದು ಚೀನಾದ ಚಾಂಗ್ಕಿಂಗ್ ನಗರದಲ್ಲಿರೋ 23 ಮಹಡಿಯ ಬೃಹತ್ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಕ್ಷಣಮಾತ್ರದಲ್ಲಿ ಬೆಂಗಿ ಇಡೀ ಮಹಡಿಯನ್ನೇ ಆವರಿಸಿಕೊಂಡಿತ್ತು. ಒಳಗೆ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿ ಅಲ್ಲಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದ. ಕಿಟಕಿ ಗಾಜನ್ನು ಒಡೆಯಲು ಯತ್ನಿಸುತ್ತಿದ್ದ. ಹೇಗೋ ಅಲ್ಲಿಂದ ಕೆಳಕ್ಕೆ ಜಂಪ್ ಮಾಡಿ ಇನ್ನೊಂದು ಮಹಡಿಯ ಬಾಲ್ಕನಿಯಲ್ಲಿ ನೇತಾಡುತ್ತಿದ್ದ.

ಈ ವೇಳೆ ಬೆಂಕಿಗೆ ಅರ್ಧಂಬರ್ಧ ಸುಟ್ಟ ಕೆಲ ವಸ್ತುಗಳು ಆತನ ಮೈಮೇಲೆ ಬೀಳಲಾರಂಭಿಸಿದ್ದವು. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಆತನನ್ನು ರಕ್ಷಣೆ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಆತ ದೃಢ ನಿರ್ಧಾರ ಕೈಗೊಂಡು ಕೆಳಕ್ಕೆ ಹಾರಿದ್ದರಿಂದ ಪ್ರಾಣ ಉಳಿಸಿಕೊಂಡಿದ್ದಾನೆ.

Chongqing fire escape.

Man narrowly escapes certain death in Chongqing high-rise fire👉 http://shst.me/fzm

Posted by Shanghaiist on Thursday, December 14, 2017

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...