alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾ ಪೊಲೀಸರಿಗೆ ನೀಡಲಾಗಿದೆ ಸ್ಮಾರ್ಟ್ ಗ್ಲಾಸ್…!

ಚೀನಾದ ಜೆಂಗ್ಝೌನಲ್ಲಿ ಪೊಲೀಸರಿಗೆಲ್ಲ ಸ್ಮಾರ್ಟ್ ಕನ್ನಡಕ ವಿತರಿಸಲಾಗಿದೆ. ಇದು ಅಂತಿಂಥಾ ಕನ್ನಡಕವಲ್ಲ, ಮುಖವನ್ನು ಗುರುತು ಹಿಡಿಯಬಲ್ಲ ಸ್ಮಾರ್ಟ್ ಗ್ಲಾಸ್. ಇದನ್ನು ಧರಿಸಿದ್ರೆ ಕ್ರಿಮಿನಲ್ ಗಳನ್ನು ಸುಲಭವಾಗಿ ಹಿಡಿಯಬಹುದು.

ಪೊಲೀಸರಿಂದ ತಪ್ಪಿಸಿಕೊಂಡು ವೇಷ ಬದಲಾಯಿಸಿಕೊಂಡು ಅಲೆದಾಡುವ ರೌಡಿಗಳು ಕೂಡ ಈ ಸ್ಮಾರ್ಟ್ ಕನ್ನಡಕದ ಕಣ್ಣಿಗೆ ಮಣ್ಣೆರಚಲು ಸಾಧ್ಯವಿಲ್ಲ. ಹಬ್ಬದ ಸೀಸನ್ ಗಳಲ್ಲಿ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಮಧ್ಯೆ ನುಸುಳಿ ತಪ್ಪಿಸಿಕೊಳ್ತಿದ್ದ ಅಪರಾಧಿಗಳನ್ನು ಸಹ ಹಿಡಿಯಲು ಇದು ಸಹಾಯ ಮಾಡ್ತಿದೆ.

ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿರೋದ್ರಿಂದ ಈಗ ಎಲ್ಲಾ ಪೊಲೀಸ್ ಅಧಿಕಾರಿಗಳಿಗೂ ಈ ಸ್ಮಾರ್ಟ್ ಗ್ಲಾಸ್ ಕೊಡಲಾಗಿದೆ. ಬೀಜಿಂಗ್ ಗೂ ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ. ಸರ್ಕಾರದ ಸಭೆಗಳಿಗೆ ಯಾರಾದ್ರೂ ಅಕ್ರಮವಾಗಿ ಪ್ರವೇಶ ಮಾಡಲು ಯತ್ನಿಸಿದ್ರೆ ಅದನ್ನು ಕೂಡ ಪತ್ತೆ ಮಾಡಬಹುದು.

ಕಳೆದ 1 ತಿಂಗಳಲ್ಲಿ ಈ ಸ್ಮಾರ್ಟ್ ಗ್ಲಾಸ್ ಸಹಾಯದಿಂದ ಪೊಲೀಸರು 9 ಕ್ರಿಮಿನಲ್ ಗಳನ್ನು ಹಿಡಿದಿದ್ದಾರೆ. ನಕಲಿ ಐಡಿ ಕಾರ್ಡ್ ಮೂಲಕ ಪ್ರಯಾಣಿಸ್ತಾ ಇದ್ದ 23 ಜನರನ್ನು ಪತ್ತೆ ಮಾಡಿದ್ದಾರೆ. ಈ ಸ್ಮಾರ್ಟ್ ಗ್ಲಾಸ್ ತಯಾರಿಸಲು ಅಂದಾಜು 41,333 ರೂಪಾಯಿ ಖರ್ಚಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...