alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತದ ರಭಸಕ್ಕೆ ಮರ ಏರಿ ಕುಳಿತಿದೆ ಕಾರು

ಚೀನಾದಲ್ಲಿ ನಡೆದ ವಿಚಿತ್ರ ಘಟನೆಯೊಂದು ಜನರ ಗಮನ ಸೆಳೆಯುತ್ತಿದೆ. ಅಪಘಾತದ ರಭಸಕ್ಕೆ ಕಾರು ಎರಡು ಮರಗಳ ಮೇಲಕ್ಕೆ ಸಿಕ್ಕಿಹಾಕಿಕೊಂಡಿದೆ. ಹಿಲೋಂಗ್ಜಿಯಾಂಗ್ ನ ಸುಯಿಹುವಾ ನಗರದ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ.

ಚಾಲಕ ರಾತ್ರಿ ಅತಿಯಾದ ವೇಗವಾಗಿ ಕಾರು ಚಲಾಯಿಸುತ್ತಿದ್ದ. ರಸ್ತೆಯ ಅಕ್ಕಪಕ್ಕದಲ್ಲಿ ಏನಿದೆ ಅನ್ನೋದು ಕೂಡ ಗೊತ್ತಾಗದಷ್ಟು ಕತ್ತಲಿತ್ತು. ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿದೆ. ಕಾರಿನ ಬಾಗಿಲು ಸೇರಿದಂತೆ ಬಿಡಿ ಭಾಗಗಳೆಲ್ಲ ದೂರಕ್ಕೆ ಹಾರಿ ಬಿದ್ದಿವೆ.

ಅಪಘಾತಕ್ಕೆ ರಭಸಕ್ಕೆ ಎಸ್ ಯು ವಿ ಮರದ ಮೇಲಕ್ಕೆ ಎಗರಿ ಕೂತಿದೆ. ಬೆಳಗ್ಗೆ ಪೊಲೀಸರು ಕ್ರೇನ್ ಸಹಾಯದಿಂದ ಕಾರನ್ನು ಕೆಳಕ್ಕೆ ಇಳಿಸಿದ್ದಾರೆ. ಕಾರಿನಲ್ಲಿ ಐವರು ಪ್ರಯಾಣಿಕರಿದ್ರು. ಅಪಘಾತದ ವೇಳೆ ಕೆಳಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...