alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ್ದಾನೆ ಸಾಹಸಿ

ನಾಲ್ಕನೇ ಮಹಡಿಯ ಕಿಟಕಿಗೆ ನೇತಾಡುತ್ತಿದ್ದ 3 ವರ್ಷದ ಬಾಲಕಿಯನ್ನು ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ್ದಾನೆ. ಚೀನಾದ ಕ್ಸಿಯಾಗಾನ್ ನಗರದಲ್ಲಿ ಈ ಘಟನೆ ನಡೆದಿದೆ.

ಮಗುವಿನ ತಾಯಿ ಸಾಮಾನು ತರಲು ಅಂಗಡಿಗೆ ತೆರಳಿದ್ಲು. ಆಟವಾಡ್ತಾ ಇದ್ದ ಬಾಲಕಿಯ ತಲೆ ಕಿಟಕಿಯ ಸರಳುಗಳ ಮಧ್ಯೆ ಸಿಕ್ಕಿಹಾಕಿಕೊಂಡುಬಿಟ್ಟಿದೆ. ಪಕ್ಕದ ಮನೆಯಲ್ಲೇ ವಾಸವಾಗಿದ್ದ ಚೆನ್ ಫಂಗ್ಯೋಂಗ್ ಎಂಬಾತ ನೆರೆಹೊರೆಯವರ ಕೂಗು ಕೇಳಿ ಧಾವಿಸಿ ಬಂದಿದ್ದ. ಕೊನೆಗೆ ಮೂರನೇ ಮಹಡಿಯ ಕಿಟಕಿಯನ್ನು ಏರಿ ಆತ ಬಾಲಕಿ ಇದ್ದಲ್ಲಿಗೆ ತೆರಳಿದ್ದಾನೆ.

ಕಿಟಕಿಯ ಗ್ರಿಲ್ ಹಿಡಿದು ನೇತಾಡಿಕೊಂಡೇ ಮಗುವನ್ನು ರಕ್ಷಣೆ ಮಾಡಿದ್ದಾನೆ. ಕೊನೆಗೆ ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಗ್ರಿಲ್ ಕತ್ತರಿಸಿ ಇಬ್ಬರನ್ನೂ ಕೆಳಕ್ಕಿಳಿಸಿದ್ರು. ಆತ ಸಮಯಕ್ಕೆ ಸರಿಯಾಗಿ ಬಾರದೇ ಇದ್ದಿದ್ರೆ ಮನೆಯ ಬಾಗಿಲು ಒಡೆದು ಒಳಹೋಗಿ ಬಾಲಕಿಯನ್ನು ರಕ್ಷಿಸಲು ನೆರೆಹೊರೆಯವರು ನಿರ್ಧರಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...