alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾದಲ್ಲಿ ನಡೆದಿದೆ ಎದೆ ನಡುಗಿಸುವಂಥ ಘಟನೆ

ಚೀನಾದಲ್ಲಿ ವ್ಯಕ್ತಿಯೊಬ್ಬ ಕುಡಿದ ಅಮಲಲ್ಲಿ 29ನೇ ಮಹಡಿಯ ಮೇಲೆ ಮಲಗಿದ್ದ. ಸ್ವಲ್ಪ ಆಚೀಚೆ ಹೊರಳಿದ್ರೂ ಆತ ಕಟ್ಟಡದಿಂದ ಕೆಳಕ್ಕೆ ಬೀಳೋದು ಗ್ಯಾರಂಟಿಯಾಗಿತ್ತು. ಆತ ನಿದ್ದೆ ಹೋಗಿದ್ದಾನೆ ಅನ್ನೋದು ಸಾರ್ವಜನಿಕರಿಗೆ ಗೊತ್ತಿರಲಿಲ್ಲ.

ಯಾರೋ ಆತ್ಮಹತ್ಯೆಗೆ ಮುಂದಾಗಿದ್ದಾರೆಂದು ಭಾವಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ನಂತರ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕುಡುಕನನ್ನು ಕೆಳಕ್ಕೆ ಕರೆತಂದಿದ್ದಾರೆ. ಚೀನಾದ ಕ್ಸಿಯಾನ್ ಎಂಬ ನಗರದಲ್ಲಿ ಈ ಘಟನೆ ನಡೆದಿದೆ.

ಕಟ್ಟಡದ ತುತ್ತ ತುದಿಯಲ್ಲಿ ಮಲಗಿ ಆತ ಆರಾಮಾಗಿ ನಿದ್ದೆ ಮಾಡ್ತಿರೋದನ್ನು ನೋಡಿ ಪೊಲೀಸರೇ ನಡುಗಿ ಹೋಗಿದ್ದಾರೆ. ಆತನನ್ನು ನಿದ್ದೆಯಿಂದ ಎಬ್ಬಿಸಿದ್ರೆ ಎಲ್ಲಿ ಕೆಳಕ್ಕೆ ಬಿದ್ದುಬಿಡ್ತಾನೋ ಅನ್ನೋ ಆತಂಕ ಸಹ ಪೊಲೀಸರಿಗಿತ್ತು. ಸ್ಥಳೀಯರು ಹೇಳೋ ಪ್ರಕಾರ ಆತ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಕಟ್ಟಡ ಏರಿದ್ದ. ಆದ್ರೆ ಅತಿಯಾಗಿ ಮದ್ಯ ಸೇವಿಸಿದ್ದರಿಂದ ಅಲ್ಲೇ ನಿದ್ದೆ ಮಾಡಿಬಿಟ್ಟಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...