alex Certify
ಕನ್ನಡ ದುನಿಯಾ       Mobile App
       

Kannada Duniya

10 ಸಾವಿರ ನಾಯಿಗಳ ಮಾರಣಹೋಮ; ತಿಂದು ತೇಗಲಿದೆ ಜನಸ್ತೋಮ

yulin-festival-22

ದಕ್ಷಿಣ ಚೀನಾದ ಯುಲಿನ್ ನಲ್ಲಿ 10 ದಿನಗಳ ‘ಡಾಗ್ ಮೀಟ್ ಫೆಸ್ಟಿವಲ್’ ಆರಂಭವಾಗಿದೆ. 10 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಸುಮಾರು 10 ಸಾವಿರ ನಾಯಿಗಳನ್ನು ಕ್ರೂರವಾಗಿ ಸಾಯಿಸಿ ಅದರ ಮಾಂಸವನ್ನು ಭಕ್ಷಿಸುತ್ತಾರಂತೆ!

ಈ ಹಬ್ಬಕ್ಕೆ ಎಷ್ಟು ಬೇಡಿಕೆ ಇದೆಯೋ ಅಷ್ಟೇ ವಿರೋಧ ಕೂಡ ಇದೆ. ಹಬ್ಬದ ಹೆಸರಿನಲ್ಲಿ ಪ್ರಾಣಿಗಳ ಹತ್ಯೆ ಮಾಡುವುದನ್ನು ಖಂಡಿಸಿ ಸುಮಾರು 10 ಲಕ್ಷ ಅರ್ಜಿಗಳು ಸರಕಾರದ ಮುಂದೆ ಸಲ್ಲಿಕೆಯಾಗಿವೆಯಾದರೂ ಇದರಿಂದ ಕಿಂಚಿತ್ತೂ ಪ್ರಯೋಜನವಾಗಿಲ್ಲ.

ಈ ಹಬ್ಬ ಇಂದು, ನಿನ್ನೆಯದಲ್ಲ ಇದಕ್ಕೆ ಸುಮಾರು 500 ವರ್ಷದ ಇತಿಹಾಸವಿದೆ. ರಸ್ತೆಯಲ್ಲಿ ಓಡಾಡುವ ನಾಯಿಗಳನ್ನು ತಂಡೋಪತಂಡವಾಗಿ ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಾರೆ. ನಂತರ ಹಲವು ದಿನಗಳ ಕಾಲ ಅದಕ್ಕೆ ಆಹಾರ ಕೊಡದೆ ಅಮಾನವೀಯವಾಗಿ ಸಾಯಿಸುತ್ತಾರೆ ಎಂದು ಅನೇಕರು ಈ ಯುಲಿನ್ ಡಾಗ್ ಫೆಸ್ಟಿವಲ್ ಅನ್ನು ವಿರೋಧಿಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...