alex Certify
ಕನ್ನಡ ದುನಿಯಾ       Mobile App
       

Kannada Duniya

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ ಚಾಲಕ

ಚೀನಾದ ಝುಝೈ ಎಂಬಲ್ಲಿ ಕ್ರೇನ್ ಬಿದ್ದು ಚಲಿಸ್ತಾ ಇದ್ದ ಆಡಿ ಕಾರ್ ಅಪ್ಪಚ್ಚಿಯಾಗಿದೆ. ಪವಾಡ ಸದೃಶ ರೀತಿಯಲ್ಲಿ ಕಾರಿನಲ್ಲಿದ್ದ ಚಾಲಕ ಪಾರಾಗಿದ್ದಾನೆ.

ರಸ್ತೆಯ ಪಕ್ಕದಲ್ಲೇ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಕ್ರೇನ್ ಕೆಳಕ್ಕೆ ಬಿದ್ದಿದೆ. ಅದೇ ಸಮಯಕ್ಕೆ ಆಡಿ ಕಾರ್ ಅಲ್ಲಿಗೆ ಬಂದಿತ್ತು. ಕ್ರೇನ್ ಆ ಕಾರಿನ ಮೇಲೆ ಬಿದ್ದಿದೆ. ಆ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿತ್ತು. ಕಾರಿನಲ್ಲಿದ್ದ ಚಾಲಕ ಬಚಾವ್ ಆಗಲು ಚಾನ್ಸೇ ಇಲ್ಲ ಅಂತಾನೇ ಎಲ್ಲರೂ ಅಂದುಕೊಂಡಿದ್ರು.

ಆದ್ರೆ ಕಾರಿನ ಚಾಲಕ ಬದುಕಿ ಬಂದಿದ್ದಾನೆ. ಸಣ್ಣಪುಟ್ಟ ಗಾಯಗಳ ಜೊತೆಗೆ ಪಾದದ ಬಳಿ ಕಾಲು ಮುರಿದಿದೆ. ಈ ದುರ್ಘಟನೆಯಲ್ಲಿ ತಾನು ಬದುಕುಳಿಯುತ್ತೇನೆ ಎಂಬ ಕಲ್ಪನೆ ಆ ಚಾಲಕನಿಗೂ ಇರಲಿಲ್ಲ.

ಕ್ರೇನ್ ಕಾರಿನ ಮೇಲೆ ಬೀಳ್ತಿದ್ದಂತೆ ತನ್ನ ಕಥೆ ಮುಗೀತು ಎಂದುಕೊಂಡಿದ್ದ ಆತ. ಆದ್ರೆ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾನೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...