alex Certify
ಕನ್ನಡ ದುನಿಯಾ       Mobile App
       

Kannada Duniya

ಹಫೀಜ್ ಬಗ್ಗೆ ಪಾಕ್ ಗೆ ಮಹತ್ವದ ಸಲಹೆ ನೀಡಿದ ಚೀನಾ

ಮುಂಬೈನ 26/11 ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಒತ್ತಡ ಹೆಚ್ಚಾಗ್ತಿದೆ. ಈ ಮಧ್ಯೆ ಚೀನಾ, ಪಾಕಿಸ್ತಾನಕ್ಕೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಹಫೀಜ್ ಸಯೀದ್ ನನ್ನು ಬೇರೆ ದೇಶಕ್ಕೆ ಕಳುಹಿಸಿ ಎಂದು ಚೀನಾ ಸಲಹೆ ನೀಡಿದೆ.

ಇಂಗ್ಲೀಷ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ ಚೀನಾದ ರಾಷ್ಟ್ರಪತಿ ಜಿನಪಿಂಗ್ ಪಾಕಿಸ್ತಾನ ಪ್ರಧಾನ ಮಂತ್ರಿಗೆ ಶಾಹಿದ್ ಖಾನ್ ಅಬ್ಬಾಸ್ ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆರಾಮದ ಜೀವನ ಸಾಗಿಸಲು ಸಾಧ್ಯವಾಗುವಂತಹ ಪಶ್ಚಿಮ ಏಷ್ಯಾ ದೇಶಗಳಿಗೆ ಹಫೀಜ್ ನನ್ನು ಕಳುಹಿಸಿ ಎಂದು ಚೀನಾ ರಾಷ್ಟ್ರಪತಿಗಳು ಹೇಳಿದ್ದಾರಂತೆ.

ಚೀನಾದ BOAO ಫೋರಮ್ ನಲ್ಲಿ ನಾಯಕರ ಮಧ್ಯೆ ಸುಮಾರು 35 ನಿಮಿಷಗಳ ಕಾಲ ಚರ್ಚೆ ನಡೆದಿದೆ. ಅದ್ರಲ್ಲಿ ಸುಮಾರು 10 ನಿಮಿಷಗಳ ಕಾಲ ನಾಯಕರು ಹಫೀಜ್ ಬಗ್ಗೆಯೇ ಚರ್ಚೆ ನಡೆಸಿದ್ದಾರೆಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...