alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ಕದ್ದು ಜಾಲಿ ರೈಡ್ ಮಾಡಿದ್ದಾನೆ 12ರ ಪೋರ

china-boy-drives-stolen-bus_650x400_41499152382

ಕಳೆದ ಶುಕ್ರವಾರ ಚೀನಾದ ಗುವಾಂಗ್ಝೌನಲ್ಲಿರೋ ಬ್ಯುಸಿ ರಸ್ತೆಯಲ್ಲಿ ಪುಟ್ಟ ಬಾಲಕನೊಬ್ಬ ಬಸ್ ಚಲಾಯಿಸುತ್ತಿದ್ದ. ಅಷ್ಟು ಸಣ್ಣ ಹುಡುಗ ಟ್ರಾಫಿಕ್ ಮಧ್ಯೆ ಬಸ್ ಓಡಿಸ್ತಾ ಇರೋದನ್ನು ನೋಡಿ ಜನರು ಆಘಾತಗೊಂಡಿದ್ರು. ಕೂಡಲೇ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

40 ನಿಮಿಷಗಳ ನಂತರ ಆ ಬಾಲಕನನ್ನು ಹಿಡಿಯುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಅಷ್ಟರಲ್ಲಿ ಆತ ಬಸ್ ಚಲಾಯಿಸಿಕೊಂಡು ಊರೆಲ್ಲಾ ಸುತ್ತಾಡಿಬಿಟ್ಟಿದ್ದ. ಝೆಂಗ್ಚೆಂಗ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಬಸ್ ಅನ್ನು ಬಾಲಕ ಕದ್ದು ತಂದಿದ್ದನಂತೆ. ಅದರಲ್ಲಿ ಸುಮಾರು 10 ಕಿಮೀ ದೂರದವರೆಗೂ ಜಾಲಿ ರೈಡ್ ಮಾಡಿದ್ದಾನೆ.

ಪೊಲೀಸರು ವಾಹನದಲ್ಲಿದ್ದ ಜಿಪಿಎಸ್ ಟ್ರಾಕ್ ಮಾಡಿ ಬಾಲಕನ್ನು ಹಿಡಿದಿದ್ದಾರೆ. ಬಾಲಕ ಒಂಟಿಯಾಗಿ ಕುಳಿತು ಬಸ್ ಓಡಿಸ್ತಾ ಇರೋ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಆತ ಇನ್ನೂ ಚಿಕ್ಕವನಾಗಿರೋದ್ರಿಂದ ಯಾವುದೇ ಪ್ರಕರಣ ದಾಖಲಿಸದೇ ಪೊಲೀಸರು ಬಿಟ್ಟು ಕಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...