alex Certify
ಕನ್ನಡ ದುನಿಯಾ       Mobile App
       

Kannada Duniya

ಜನಿಸಲಿರುವ ಮಗು ಬಗ್ಗೆ ತಿಳ್ಕೊಬೇಕಾ…? ಹಾಗಾದ್ರೆ ಓದಿ

Father At Home With Sleeping Newborn Baby Daughter

ಮಕ್ಕಳೆಂದರೆ ತಾಯಿಗೆ ಎಲ್ಲಿಲ್ಲದ ಪ್ರೀತಿ. ಹುಟ್ಟುವ ಮಗು ಸುಂದರವಾಗಿರಲಿ, ಬೆಳ್ಳಗಿರಲಿ ಎಂಬ ಕಾರಣಕ್ಕೆ ಕೇಸರಿ ಮೊದಲಾದವುಗಳನ್ನು ಸೇವಿಸುತ್ತಾರೆ. ಜನಿಸಲಿರುವ ಮಗುವಿನ ಬಗ್ಗೆ ಏನೇನೋ ಕನಸು ಕಟ್ಟಿಕೊಂಡಿರುತ್ತಾರೆ.

ತಾಯಿಯ ಗರ್ಭದಲ್ಲಿ ಒಂದು ವಾರ ಹೆಚ್ಚು ಇರುವ ಮಗು ಸಾಮಾನ್ಯರಿಗಿಂತ ಹೆಚ್ಚು ಮಾನಸಿಕ ಸಾಮರ್ಥ್ಯವನ್ನು ಹೊಂದಿರುತ್ತವೆ. ಕೆಲವೊಮ್ಮೆ ಅವಧಿ ಮೀರಿ ಗರ್ಭದಲ್ಲಿರುವ ಮಕ್ಕಳು ಕೊಂಚ ದೈಹಿಕ ನ್ಯೂನತೆಗೆ ಒಳಗಾಗಬಹುದಾದ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. 40 ವಾರ ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿರುವ ಮಕ್ಕಳಿಗಿಂತ, 41 ವಾರಕ್ಕೆ ಜನಿಸುವ ಮಕ್ಕಳು ಬೇರೆ ಮಕ್ಕಳಿಗಿಂತ ಮಾನಸಿಕವಾಗಿ ಸದೃಢವಾಗಿರುತ್ತಾರೆ ಎಂದು ಜಾಮಾ ಪಿಡಿಯಾಟ್ರಿಕ್ಸ್ ನಿಯತಕಾಲಿಕದ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಯೂನಿವರ್ಸಿಟಿ ಆಫ್ ಫ್ಲೋರಿಡಾ ಕಾಲೇಜ್ ಆಫ್ ಮೆಡಿಸಿನ್ ನ ಜೆಫ್ರಿ ರೋತ್ ಅವರ ಪ್ರಕಾರ, ನಿಗದಿತ ಗರ್ಭಾವಸ್ಥೆಯಲ್ಲಿರುವ ಮಕ್ಕಳಿಗಿಂತ ಹೆಚ್ಚು ಅವಧಿಯಲ್ಲಿರುವ ಮಕ್ಕಳು ದೈಹಿಕ ನ್ಯೂನತೆಗೆ ಒಳಗಾಗಬಹುದಾದ ಸಾಧ್ಯತೆ ಇದೆ. ಆದರೆ, 41 ವಾರ ಗರ್ಭದಲ್ಲಿರುವ ಮಕ್ಕಳು ಚುರುಕಾಗಿರುತ್ತವೆ ಕೂಡ ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...