alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಪೋಷಕರಿಗೊಂದು ಗುಡ್ ನ್ಯೂಸ್

ಪೋಷಕರಿಗೆ ನಿಜಕ್ಕೂ ಇದು ಗುಡ್ ನ್ಯೂಸ್. ನಿಮ್ಮ ಮಕ್ಕಳು ಮೊಬೈಲ್ ಬಳಸದಂತೆ ಹೇಗೆ ತಡೆಯೋದು ಅಂತಾ ಚಿಂತೆ ಮಾಡಬೇಕಾಗಿಲ್ಲ. ಇನ್ಮೇಲೆ ಮಕ್ಕಳು ಸ್ಮಾರ್ಟ್ ಫೋನ್ ಆಪರೇಟ್ ಮಾಡಲು ಶುರು ಮಾಡಿದ್ರೆ ಅದು ತಂತಾನೇ ಲಾಕ್ ಆಗಿಬಿಡುತ್ತದೆ.

ಯೂನಿವರ್ಸಿಟಿ ಆಫ್ ಸೌತ್ ಕೆರೊಲಿನಾ ಹಾಗೂ ಚೀನಾದ ಜೆಜಿಯಾಂಗ್ ಯೂನಿವರ್ಸಿಟಿಯ ವಿಜ್ಞಾನಿಗಳು ಈ ಹೊಸ ತಂತ್ರಜ್ಞಾನವನ್ನು ಸಂಶೋಧಿಸಿದ್ದಾರೆ. ಮಕ್ಕಳು ಹಾಗೂ ವಯಸ್ಕರ ಸ್ವೈಪ್ ಆ್ಯಕ್ಷನ್ ಗಳಲ್ಲಿ ವ್ಯತ್ಯಾಸವಿರುತ್ತದೆ. ಮಕ್ಕಳ ಕೈಗಳು ಚಿಕ್ಕದಾಗಿರುತ್ತವೆ.

ಬೆರಳ ತುದಿ ಸಹ ಗಿಡ್ಡಕ್ಕಿರುತ್ತದೆ. ಡಿಸ್ ಪ್ಲೇ ಸ್ಕ್ರೀನ್ ನಲ್ಲಿ ಅವರ ಟಚ್ ಏರಿಯಾ ಕೂಡ ವಯಸ್ಕರಿಗಿಂತ ಕಡಿಮೆ ಇರುತ್ತದೆ. ಸ್ವೈಪ್ ಮತ್ತು ಟ್ಯಾಪಿಂಗ್ ನಲ್ಲಿ ಮಕ್ಕಳು ಸ್ವಲ್ಪ ನಿಧಾನ ಮಾಡುತ್ತಾರೆ. ಈ ವ್ಯತ್ಯಾಸಗಳ ಮೂಲಕ ಮೊಬೈಲ್ ಅನ್ನು ಯಾರು ಬಳಸ್ತಿದ್ದಾರೆ ಅನ್ನೋದನ್ನು ಪತ್ತೆ ಮಾಡಲಾಗುತ್ತದೆ.

3-11 ವರ್ಷದೊಳಗಿನ ಮಕ್ಕಳು ಸ್ಮಾರ್ಟ್ ಫೋನ್ ಬಳಸುತ್ತಿದ್ರೆ ಅದು ತಂತಾನೇ ಡಿಟೆಕ್ಟ್ ಆಗುತ್ತದೆ. ಜೊತೆಗೆ ಮೊಬೈಲ್ ಲಾಕ್ ಆಗಲಿದೆ. ಆಗ ಹೆದರಿ ಮಕ್ಕಳು ಮೊಬೈಲ್ ಅನ್ನು ಹೆತ್ತವರಿಗೆ ಒಪ್ಪಿಸಲೇಬೇಕಾಗುತ್ತದೆ. ಇಲ್ಲವೇ ಕೆಲವೊಂದು ಆ್ಯಪ್ ಗಳು ತಂತಾನೇ ಲಾಕ್ ಆಗುತ್ತವೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...