alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ಗ್ಲಾಮರಸ್ ಗುಟ್ಟು ಬಿಚ್ಚಿಟ್ಟ ಮುಗ್ದ ಬಾಲಕಿ

Child-drawing12

ಮಕ್ಕಳ ಬಾಯಲ್ಲಿ ಏನೂ ನಿಲ್ಲುವುದಿಲ್ಲ. ಇದ್ದದ್ದನ್ನು ಇದ್ದ ಹಾಗೆಯೇ ಹೇಳಿ ಬಿಡ್ತಾರೆ. ಪ್ರಾಮಾಣಿಕತೆ ಹಾಗೂ ಸತ್ಯ, ಮುಗ್ದತೆ ಅವರ ಸಂಕೇತ. ಹಾಗಾಗಿಯೇ ಮಕ್ಕಳೆಂದ್ರೆ ಎಲ್ಲರಿಗೂ ಇಷ್ಟ. ಅವರು ಏನು ಮಾಡಿದ್ರೂ ಚೆಂದ. ಲಂಡನ್ ನ ಬಾಲಕಿಯೊಬ್ಬಳು ಬಿಡಿಸಿದ ಚಿತ್ರಕಲೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಆರು ವರ್ಷದ ಬಾಲಕಿ ತನ್ನ ಅಮ್ಮ ಮನೆಯಲ್ಲಿ ಹೇಗಿರ್ತಾಳೆ, ಹೊರಗೆ ಹೋಗುವಾಗ ಹೇಗಿರ್ತಾಳೆ ಎಂಬುದನ್ನು ಚಿತ್ರದ ಮೂಲಕ ತೋರಿಸಿದ್ದಾಳೆ. ಒಂದು ಚಿತ್ರದಲ್ಲಿ ಕೆದರಿದ ಕೂದಲು, ಹಳೆಯ ಡ್ರೆಸ್, ನಿದ್ದೆ ಕಣ್ಣಿನ ಅಮ್ಮನ ಚಿತ್ರವನ್ನು ಬಿಡಿಸಿದ್ದಾಳೆ. ಇನ್ನೊಂದರಲ್ಲಿ ಮಿನಿ ಉಡುಗೆ, ಹೀಲ್ಸ್, ದಪ್ಪ ಕೂದಲು, ಕೆಂಪು ತುಟಿಯುಳ್ಳ ಅಮ್ಮನನ್ನು ಬಿಡಿಸಿದ್ದಾಳೆ.

ಆಕೆ ಬರೆದ ಚಿತ್ರವನ್ನು ಆನ್ಲೈನ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ನನ್ನ ಸ್ನೇಹಿತನ ಮಗಳು ಸ್ಕೂಲಿನಲ್ಲಿ ಈ ಚಿತ್ರ ಬಿಡಿಸಿದ್ದಾಳೆಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ. ಈವರೆಗೆ ಸುಮಾರು 20 ದಶಲಕ್ಷ ಜನ ಇದನ್ನು ನೋಡಿದ್ದಾರೆ. ಮುಗ್ದವಾಗಿ ಮಗು ಬಿಡಿಸಿರುವ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಸಾಕಷ್ಟು ಕಮೆಂಟ್ ಗಳು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...