alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಚೀನಾದಲ್ಲಿ ನಡೆದ ಬೆಚ್ಚಿಬೀಳಿಸೋ ಅಪಘಾತ

ವಿದ್ಯಾರ್ಥಿಯೊಬ್ಬ ಚಲಿಸುತ್ತಿದ್ದ ಕಾರಿನಡಿ ಸಿಲುಕಿದ ಭಯಾನಕ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ನವೆಂಬರ್ 13ರಂದು ಚೀನಾದ ಯುಯಿಕಿಂಗ್ ಕೌಂಟಿಯಲ್ಲಿ ನಡೆದ ಘಟನೆ ಇದು.

ರಸ್ತೆಯಲ್ಲೇ ನಿಂತು ಬಾಲಕ ಶೂಲೇಸ್ ಕಟ್ಟಿಕೊಳ್ತಿದ್ದ. ವೇಗವಾಗಿ ಬಂದ ಕಾರು ಅವನ ಮೈಮೇಲೆ ಹರಿದಿದೆ. ಕೂಡಲೇ ಕಾರು ನಿಲ್ಲಿಸಿದ ದಂಪತಿ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಕಾರಿನಡಿ ಸಿಕ್ಕಿಕೊಂಡಿದ್ದ ಬಾಲಕನನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಸಾರ್ವಜನಿಕರೆಲ್ಲ ಒಟ್ಟಾಗಿ ಕಾರನ್ನು ಮೇಲಕ್ಕೆತ್ತಿ ಬಾಲಕನನ್ನು ಬಚಾವ್ ಮಾಡಿದ್ದಾರೆ.

ಕೂಡಲೇ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯ್ತು. ಅದೃಷ್ಟವಶಾತ್ ಆತನಿಗೆ ಗಂಭೀರ ಗಾಯಗಳಾಗಿಲ್ಲ. ಬೆನ್ನಿಗೆ ಹಾಕಿಕೊಂಡಿದ್ದ ಬ್ಯಾಗ್, ಕಾರಿನ ಟೈರ್ ಅಡಿ ಸಿಲುಕಿದ್ದರಿಂದ ಬಾಲಕ ಬದುಕುಳಿದಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...